ಬೆಂಗಳೂರು ಬಾಯ್ ವರ್ಸಸ್ ರೈಡರ್! ಜೂ. ಚೆಲುವರಾಯಸ್ವಾಮಿ ವರ್ಸಸ್ ಜೂ. ಕುಮಾರಸ್ವಾಮಿ!
ನಾಲ್ಕು ವರ್ಷಗಳ ಹಿಂದೆ ಹ್ಯಾಪಿ ಬರ್ತ್ಡೇ ಚಿತ್ರದ ಮೂಲಕ ಸ್ಯಾಂಡಲ್ವುಡ್ ಡೆಬ್ಯೂ ಮಾಡಿದ್ದ ಸಚಿನ್ ಚೆಲುವರಾಯಸ್ವಾಮಿ ಈಗ ಬ್ರೇಕ್ನ ಬಳಿಕ ಹೊಚ್ಚ ಹೊಸ ಕಥೆಯೊಂದಿಗೆ ಮತ್ತೆ ವಾಪಸ್ಸಾಗಿದ್ದಾರೆ. ಸಿನಿಮಾ ಹೆಸರು ಬೆಂಗಳೂರು ಬಾಯ್ಸ್.
ಅತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾ ರೈಡರ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅದರ ಬೆನ್ನಲ್ಲೇ ಇತ್ತ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಚೆಲುವರಾಯಸ್ವಾಮಿ ಅವರ ಹೊಸ ಸಿನಿಮಾ ಕೂಡ ಕಿಕ್ ಸ್ಟಾರ್ಟ್ ಆಗಿದೆ.
2/ 9
ಹೌದು, ನಾಲ್ಕು ವರ್ಷಗಳ ಹಿಂದೆ ಹ್ಯಾಪಿ ಬರ್ತ್ಡೇ ಚಿತ್ರದ ಮೂಲಕ ಸ್ಯಾಂಡಲ್ವುಡ್ ಡೆಬ್ಯೂ ಮಾಡಿದ್ದ ಸಚಿನ್ ಚೆಲುವರಾಯಸ್ವಾಮಿ ಈಗ ಬ್ರೇಕ್ನ ಬಳಿಕ ಹೊಚ್ಚ ಹೊಸ ಕಥೆಯೊಂದಿಗೆ ಮತ್ತೆ ವಾಪಸ್ಸಾಗಿದ್ದಾರೆ. ಸಿನಿಮಾ ಹೆಸರು ಬೆಂಗಳೂರು ಬಾಯ್ಸ್.
3/ 9
ಈ ಚಿತ್ರಕ್ಕೆ ಲಂಡನ್ನಲ್ಲಿ ಲಂಬೋದರ ಖ್ಯಾತಿಯ ರಾಜ್ ಸೂರ್ಯ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲೇ ಚಿತ್ರದ ಶೂಟಿಂಗ್ ಕಿಕ್ಸ್ಟಾರ್ಟ್ ಆಗಿದೆ. ಮೊದಲ ದಿನದ ಚಿತ್ರೀಕರಣದ ವರ್ಕಿಂಗ್ ಸ್ಟಿಲ್ಗಳು ರಿಲೀಸ್ ಆಗಿದ್ದು, ಸಚಿನ್ ಬಾಕ್ಸಿಂಗ್ ಗ್ಲೌಸ್ ತೊಟ್ಟು ಬಾಕ್ಸರ್ ಲುಕ್ನಲ್ಲಿ ಮಿಂಚಿದ್ದಾರೆ.
4/ 9
ಮೊದಲ ಚಿತ್ರದಿಂದ ಈ ಎರಡನೇ ಚಿತ್ರದವರೆಗೂ ನಾಲ್ಕು ವರ್ಷಗಳ ಗ್ಯಾಪ್ನಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಸಚಿನ್ ಈ ಬಾರಿ ಥಿಯೇಟರ್ನಲ್ಲಿ ಸೆಂಚುರಿ ದಿನಗಳನ್ನು ಪೂರೈಸಲೇಬೇಕು ಎಂಬ ದೃಢ ನಿರ್ಧಾರದೊಂದಿಗೆ ರೀಎಂಟ್ರಿ ಕೊಟ್ಟಿರುವಂತಿದೆ
5/ 9
ನಟನೆಯ ಜೊತೆಗೆ ಡ್ಯಾನ್ಸ್, ಫಿಟ್ನೆಸ್, ಫೈಟ್ಸ್, ಸ್ಟಂಟ್ಗಳಲ್ಲೂ ತರಬೇತಿ ಪಡೆದಿರುವ ಸಚಿನ್ ಚೆಲುವರಾಯಸ್ವಾಮಿ, ಒಬ್ಬ ಮಾಸ್ ಹೀರೋಗೆ ಬೇಕಿರುವ ಎಲ್ಲ ಎಲಿಮೆಂಟ್ಗಳನ್ನೂ ಕರಗತ ಮಾಡಿಕೊಂಡು ಬೆಂಗಳೂರು ಬಾಯ್ಸ್ ಮೂಲಕ ವಾಪಸ್ಸಾಗಿದ್ದಾರೆ.
6/ 9
ಅಂದಹಾಗೆ ಪಕ್ಕಾ ಯೂತ್ಫುಲ್ ಎಂಟರ್ಟೈನರ್ ಆಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಸಚಿನ್ ಚೆಲುವರಾಯಸ್ವಾಮಿ ಅವರದೂ ಯೂತ್ಫುಲ್ ಪಾತ್ರ.
7/ 9
ಚಿತ್ರದ ಮತ್ತೊಂದು ವಿಶೇಷತೆ ಅಂದರೆ, ಇದುವರೆಗೆ ನಟನಾಗಿ, ರಾಪ್ ಹಾಡುಗಳ ಮೂಲಕ ಗಮನ ಸೆಳೆದಿದ್ದ ರಾಪರ್ ಆಲ್ಓಕೆ ಅಲಿಯಾಸ್ ಅಲೋಕ್, ಇದೇ ಮೊದಲ ಬಾರಿಗೆ ಬೆಂಗಳೂರು ಬಾಯ್ಸ್ ಮುಖೇನ ಮ್ಯೂಸಿಕ್ ಡೈರೆಕ್ಟರ್ ಆಗಿ ಭಡ್ತಿ ಪಡೆದಿದ್ದಾರೆ. ಚಿತ್ರದ ಎಲ್ಲ ಹಾಡುಗಳನ್ನೇ ಅವರೇ ಕಂಪೋಸ್ ಮಾಡುತ್ತಿದ್ದಾರೆ.
8/ 9
ಹೀಗೆ ಬೆಂಗಳೂರು ಬಾಯ್ಸ್ ಅನ್ನೋ ಎರಡನೇ ಅಟೆಂಪ್ಟ್ ಮೂಲಕ ಹ್ಯಾಪಿ ಬರ್ತ್ಡೇ ನಾಯಕ ಸಚಿನ್ ಚೆಲುವರಾಯಸ್ವಾಮಿ ಹಾಗೂ ಲಂಡನ್ನಲ್ಲಿ ಲಂಬೋದರ ನಿರ್ದೇಶಕ ರಾಜ್ ಸೂರ್ಯ, ಸೆಂಚುರಿ ಬಾರಿಸಲು ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಇನ್ನೂ ಪ್ರಾರಂಭದ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಉಳಿದ ತಾರಾಬಳಗದ ಕುರಿತು ಚಿತ್ರತಂಡ ಸಂಪೂರ್ಣ ಮಾಹಿತಿ ನೀಡಲಿದೆ.