Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

ED Raid: ಪೊನ್ನಿಯಿನ್ ಸೆಲ್ವನ್ ಸಿನಿಮಾ ಸೂಪರ್ ಹಿಟ್ ಆದ ನಂತರ ಇದೀಗ ಇಡಿ ರೈಡ್ ಆಗಿದೆ. ಚಿತ್ರ ನಿರ್ಮಾಪಕರ ತಂಡದ ಮೇಲೆ ರೈಡ್ ನಡೆದಿದೆ.

First published:

  • 17

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಪೊನ್ನಿಯಿನ್ ಸೆಲ್ವನ್ ಸಿನಿಮಾ ಸೂಪರ್ ಹಿಟ್ ಆಗಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮಂಗಳವಾರ ಲೈಕಾ ಪ್ರೊಡಕ್ಷನ್ಸ್ ಮೇಲೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾಗಳನ್ನು ನಿರ್ಮಿಸಿದ ಲೈಕಾ ಪ್ರೊಡಕ್ಷನ್ಸ್ ತಂಡದ ಮೇಲೆ ತಮಿಳುನಾಡಿನ ಚೆನ್ನೈನಲ್ಲಿ ಇಡಿ ರೈಡ್ ನಡೆದಿದೆ.

    MORE
    GALLERIES

  • 27

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಪೊನ್ನಿಯಿನ್ ಸೆಲ್ವನ್ 1, ಪೊನ್ನಿಯಿನ್ ಸೆಲ್ವನ್2 ಸಿನಿಮಾಗಳನ್ನು ನಿರ್ಮಿಸಿದ ಕಾಲಿವುಡ್​ನ ಖ್ಯಾತ ಪ್ರೊಡಕ್ಷನ್ ಹೌಸ್ ಲೈಕಾ ಪ್ರೊಡಕ್ಷನ್ಸ್ ಮೇಲೆ ದಾಳಿ ನಡೆದಿದೆ. ಹಣ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಹಲವು ಪ್ರದೇಶದಲ್ಲಿ ಇಡಿ ದಾಳಿ ನಡೆಸಿ ಪರಶೀಲಿಸಿದೆ.

    MORE
    GALLERIES

  • 37

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಈ ಸಿನಿಮಾದ ಮೊದಲ ಭಾಗ ಪೊನ್ನಿಯಿನ್ ಸೆಲ್ವನ್ 1 ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿತ್ತು. ಸಿನಿಮಾ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸಕ್ಸಸ್ ಮೂವಿ ಎನಿಸಿತ್ತು. ಈಗ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಕೂಡಾ 350 ಕೋಟಿಗೂ ಹೆಚ್ಚು ಗಳಿಸಿ ಸುದ್ದಿ ಮಾಡಿದೆ.

    MORE
    GALLERIES

  • 47

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಸೂಪರ್ ಹಿಟ್ ಆಗಿರುವ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್​ನಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಮಣಿರತ್ನಂ ಸಿನಿಮಾ ಕಮರ್ಷಿಯಲ್ ಸಕ್ಸಸ್ ಎನ್ನುವುದರಲ್ಲಿ ಸಂದೇಹವೇ ಇಲ್ಲ.

    MORE
    GALLERIES

  • 57

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಪೊನ್ನಿಯನ್ ಸೆಲ್ವನ್ 2 ಮೊದಲ ದಿನ ತೆಲುಗು ರಾಜ್ಯಗಳಲ್ಲಿ 1.40 ಶೇರ್ ಪಡೆದುಕೊಂಡಿದೆ. 2.80 ಒಟ್ಟು ಗಳಿಸಿದೆ. ತೆಲುಗಿನಲ್ಲಿ ಸಿನಿಮಾ ಒಟ್ಟು 10 ಕೋಟಿ ಬ್ಯುಸಿನೆಸ್ ಮಾಡಿದೆ. ಪೊನ್ನಿಯನ್ ಸೆಲ್ವನ್ 2 ಚಿತ್ರದ ಮೊದಲ ದಿನದ ಒಟ್ಟು ವರ್ಲ್ಡ್ ವೈಡ್ ಕಲೆಕ್ಷನ್ ನೋಡಿದರೆ 26.10 ಕೋಟಿ ಶೇರ್ ಹಾಗೂ 54 ಕೋಟಿ ಗ್ರಾಸ್ ಬಂದಿದೆ ಎಂದು ಟ್ರೇಡ್ ಮೂಲಗಳು ತಿಳಿಸಿದೆ.

    MORE
    GALLERIES

  • 67

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಈ ವರ್ಷ ತಮಿಳಿನಲ್ಲಿ ಬಿಡುಗಡೆಯಾದ ದೊಡ್ಡ ಸಿನಿಮಾಗಳಲ್ಲಿ ಪೊನ್ನಿಯನ್ ಸೆಲ್ವನ್ ಕೂಡ ಒಂದು. ಒಳ್ಳೆ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ನಿರೀಕ್ಷೆಯಂತೆಯೇ ಕಲೆಕ್ಷನ್ ಮಾಡಿದೆ. ಈ ಸಿನಿಮಾ ತೆಲುಗಿನಲ್ಲಿ ನಿರೀಕ್ಷಿತ ರೇಂಜ್ ನಲ್ಲಿ ಮಿಂಚಲಿಲ್ಲ. ಆದರೆ ತಮಿಳಿನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.

    MORE
    GALLERIES

  • 77

    Ponniyin Selvan: ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರ ಮೇಲೆ ED ರೈಡ್

    ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ ಜೊತೆಗೆ ಐಶ್ವರ್ಯಾ ರೈ ಮತ್ತು ತ್ರಿಷಾ ಅವರಂತಹ ದೊಡ್ಡ ತಾರಾಗಣವನ್ನು ಹೊಂದಿರುವ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಭಾಗ 1 ಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದೀಗ ಪಾರ್ಟ್ 2 ಕಾಲಿವುಡ್​ನಲ್ಲಿ ಕಲೆಕ್ಷನ್ ವಿಷಯದಲ್ಲಿ ಅಪರೂಪದ ದಾಖಲೆ ಬರೆದಿದೆ.

    MORE
    GALLERIES