Tollywood: ಬಾಲಯ್ಯನ ಎದುರು ತೊಡೆ ತಟ್ಟಲಿರುವ ದುನಿಯಾ ವಿಜಯ್..!
ಕನ್ನಡದ ಕರಿ ಚಿರತೆ ವಿಜಯ್ (Duniya Vijay) ಅವರು ಟಾಲಿವುಡ್ನಲ್ಲಿ ಖಾತೆ ತೆರೆಯಲಿದ್ದಾರಂತೆ. ಟಾಲಿವುಡ್ನ ನಟ ನಂದಮೂರಿ ಬಾಲಕೃಷ್ಣ (Balakrishna) ಅವರ ಅಭಿನಯದ ಹೊಸ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. (ಚಿತ್ರಗಳು ಕೃಪೆ: ದುನಿಯಾ ವಿಜಯ್ ಇನ್ಸ್ಟಾಗ್ರಾಂ ಖಾತೆ)
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ಸಿಕ್ಕ ನಂತರ ರಿಲೀಸ್ ಆಗಿರುವ ಈ ಸಿನಿಮಾ ಬಾಕ್ಸಾಫಿಸ್ನಲ್ಲೂ ಸಖತ್ ಸದ್ದು ಮಾಡುತ್ತಿದೆ.
2/ 6
ಸಲಗ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ದುನಿಯಾ ವಿಜಯ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು, ಅದು ವಿಜಯ್ ಅವರು ಟಾಲಿವುಡ್ನಲ್ಲಿ ಖಾತೆ ತರೆಯಲಿರುವ ವಿಷಯ.
3/ 6
ಹೌದು, ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಅನ್ನೋ ಸುದ್ದಿ ಸದ್ಯ ಹರಿದಾಆಡುತ್ತಿದೆ. ಈ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
4/ 6
ಇನ್ನೂ ಹೆಸರಿಡದ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಗೋಪಿಚಂದ್ ಮಾಲಿನೇನಿ ಅವರು ನಿರ್ದೇಶನ ಮಾಡಿಲಿದ್ದಾರೆ.
5/ 6
ಬಾಲಕೃಷ್ಣ ಅವರ ಈ ಹೊಸ ಸಿನಿಮಾಗೆ ಎನ್ಬಿಕೆ 107 ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಇದೇ 13ರಂದು ನಡೆಯಲಿದೆ ಎನ್ನಲಾಗುತ್ತಿದೆ.
6/ 6
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರಾ ಅಥವಾ ಇಲ್ಲ ಅನ್ನೋದು ಇದೇ ಶನಿವಾರ ಬಹಿರಂಗವಾಗಲಿದೆ ಎಂದೂ ಅಂದಾಜಿಸಲಾಗುತ್ತಿದೆ. ಈ ಸುದ್ದಿ ನಿಜವಾದಲ್ಲಿ ವಿಜಯ್ ಅಭಿಮಾನಿಗಳಿಗೆ ಹಬ್ಬ.