ದುನಿಯಾ ವಿಜಯ್ (Duniya Vijay) ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ (Salaga) ಸಿನಿಮಾ ಇದೇ ತಿಂಗಳ 14ರಂದು ರಿಲೀಸ್ ಆಗಲಿದೆ. ವಿಜಯ್ ನಾಯಕನಾಗಿ ನಟಿಸಿರುವ ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡಯಲಿದೆ. ಹೀಗಿರುವಾಗಲೇ ಈ ಚಿತ್ರತಂಡಕ್ಕೆ ಜೊತೆಯಾಗಿದ್ದಾರೆ ಪುನೀತ್ ರಾಜ್ಕುಮಾರ್ (Puneeth Rajkumar). (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
ಕೆ.ಪಿ. ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ಮುಂದಿನ ಗುರುವಾರ ತೆರೆ ಕಾಣಲಿದೆ. ಈಗಾಲೇ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಲಾಕ್ಡೌನ್ ನಂತರ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟ ನಂತರ ರಿಲೀಸ್ ಆಗುತ್ತಿರುವ 2ನೇ ಸಿನಿಮಾ ಇದಾಗಿದೆ.
2/ 6
ಸಲಗ ಹಾಗೂ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಒಂದೇ ದಿನ ರಿಲೀಸ್ ಆಗಲಿದೆ. ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡಲಿರುವ ಎರಡೂ ಚಿತ್ರಗಳಲ್ಲಿ ಯಾವುದು ಪ್ರೇಕ್ಷಕರ ಮನ ಗೆಲ್ಲಲಿದೆ ಅಂತ ನೋಡಬೇಕಿದೆ.
3/ 6
ಇನ್ನು ಸಿನಿಮಾ ರಿಲೀಸ್ಗೂ ಮೊದಲು ಪ್ರೀ-ರಿಲೀಸ್ ಇವೆಂಟ್ ನಡೆಸಲು ಸಲಗ ಚಿತ್ರತಂಡ ಯೋಚಿಸಿದೆ. ಆ ಕಾರ್ಯಕ್ರಮದಲ್ಲಿ ಸಲಗ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
4/ 6
ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಅವರನ್ನು ಆಹ್ವಾನಿಸಲು ದುನಿಯಾ ವಿಜಯ್ ಸೇರಿದಂತೆ ಇಡೀ ಚಿತ್ರತಂಡ ಅವರ ಮನೆಗೆ ಹೋಗಿತ್ತು. ಪುನೀತ್ ರಾಜ್ಕುಮಾರ್ ಅವರ ಜತೆ ಸಿದ್ಧರಾಮಯ್ಯ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರಂತೆ.
5/ 6
ಪುನೀತ್ ರಾಜ್ಕುಮಾರ್ ಹಾಗೂ ದುನಿಯಾ ವಿಜಯ್ ಅವರು ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಲಗ ಸಿನಿಮಾದಲ್ಲಿ ಧನಂಜಯ್ ಸಹ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.
6/ 6
ಈ ಹಿಂದೆಯೂ ಪುನೀತ್ ರಾಜ್ಕುಮಾರ್ ಸಲಗ ಸಿನಿಮಾಗೆ ಬೆಂಬಲ ನೀಡಿದ್ದರು. ಸಲಗ ಸಿನಿಮಾದ ಮಳೆಯೇ ಮಳೆಯೇ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಿದ್ದರು.