ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆಗೆ ಮೃಣಾಲ್ ಠಾಕೂರ್ ನಟಿಸುತ್ತಿದ್ದರೆ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಸುಮಂತ್ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡುವ ಮೂಲಕ ಹೈಪ್ ಕ್ರಿಯೇಟ್ ಮಾಡಿದ ಚಿತ್ರತಂಡ ಇಂದು ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದೆ.
ಮತ್ತೊಂದೆಡೆ, ಈಗಾಗಲೇ ಈ ಸೀತಾರಾಮ್ ಅನ್ನು ನೋಡಿರುವ ಯುಎಸ್ ಪ್ರೇಕ್ಷಕರು ಮತ್ತು ಪ್ರೀಮಿಯರ್ ನೋಡಿದ ಸಾರ್ವಜನಿಕರು ಟ್ವಿಟರ್ ವೇದಿಕೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ಹೇಗಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮತ್ತು ಆ ರಿಪೋರ್ಟ್ ಪ್ರಕಾರ ಈ ಸಿನಿಮಾದ ಫಸ್ಟ್ ಟಾಕ್ ಹೇಗಿದೆ ನೋಡೋಣ.