ಮಂಡಲ ಪೂಜೆಗಾಗಿ ಎರಡು ತಿಂಗಳ ಕಾಲ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇಗುಲ ತೆರೆಯಲಾಗಿದ್ದು, ದೇವರ ದರ್ಶನಕ್ಕಾಗಿ ಭಕ್ತರು ಮುಗಿಬೀಳುತ್ತಿದ್ದಾರೆ. ಇನ್ನು ಹಲವು ಸೆಲೆಬ್ರಿಟಿಗಳ ಆರಾಧ್ಯ ದೈವರಾಗಿರುವ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಖ್ಯಾತ ಡ್ರಮ್ಮರ್ ಆಗಿರುವ ಶಿವಮಣಿ ಕೂಡ ಅಯ್ಯಪ್ಪನ ದರ್ಶನ ಪಡೆದು, ಕಾರ್ಯಕ್ರಮ ಪ್ರದರ್ಶಿಸಿದ್ದಾರೆ.