Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

ವರದಕ್ಷಿಣೆ ಕೇಸ್​ನಲ್ಲಿ ಜೈಲು ಪಾಲಾಗುವ ಆತಂಕದಲ್ಲಿದ್ದ ನಟಿ ಅಭಿನಯ (Abhinaya) ಅವರಿಗೆ ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್​ನಲ್ಲಿ ಅವರಿಗೆ ಜಾಮೀನು ಕೂಡ ದೊರೆತಿದೆ.

First published:

  • 19

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಅಭಿನಯ ಜೊತೆಗೆ ಅವರ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜು ಕೂಡ ಜಾಮೀನು ಪಡೆದುಕೊಂಡಿದ್ದಾರೆ.

    MORE
    GALLERIES

  • 29

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಭಿನಯಾ ಅವರಿಗೆ ಇತ್ತೀಚೆಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದ್ದು. ಹೈಕೋರ್ಟ್ ನೀಡಿದ ಈ ತೀರ್ಪನ್ನು ಪ್ರಶ್ನಿಸಿ ಅಭಿನಯ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮಂಜೂರಾಗಿದೆ.

    MORE
    GALLERIES

  • 39

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ದಾಖಲು ಮಾಡಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಪರಾಧಿಗಳಿಗೆ ಸೆಕ್ಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅಭಿನಯ ಅವರು ಹೈಕೋರ್ಟ್​ಗೆ ಅರ್ಜಿ ಮೇಲ್​ ಮನವಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆದು ಉಚ್ಚ ನ್ಯಾಯಾಲಯ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತ ಹಿಡಿದಿತ್ತು.

    MORE
    GALLERIES

  • 49

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ಹಿರಿಯ ನಟಿ ಅಭಿನಯ 1983ರಲ್ಲಿ ಖ್ಯಾತ ನಿರ್ದೇಶಕ ಕಾಶಿನಾಥ್ ಅವರ ಸೂಪರ್ ಹಿಟ್ ಚಿತ್ರ `ಅನುಭವ' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಇವರು ನಟಿಸಿದ `ಹೋದೆಯಾ ದೂರ ಓ ಜೊತೆಗಾರ' ಸಾಂಗ್ ಸಖತ್ ಹಿಟ್ ಆಗಿತ್ತು.

    MORE
    GALLERIES

  • 59

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ಅಭಿನಯ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದರು. ಅವರು ಬಾಲ ಕಲಾವಿದೆಯಾಗಿ ಭಾಗ್ಯವಂತ, ದೇವತಾ ಮನುಷ್ಯ ಮತ್ತು ಬೆಂಕಿಯ ಬಾಲೆಯಲ್ಲಿ ನಟಿಸಿದ್ದಾರೆ. 13 ನೇ ವಯಸ್ಸಿನಲ್ಲಿ ಅನುಭವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು.

    MORE
    GALLERIES

  • 69

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ನಟಿ ಅಭಿನಯ ತಮ್ಮ ಪೋಷಕರೊಂದಿಗೆ ಸೇರಿಕೊಂಡು ಅಣ್ಣನ ಹೆಂಡತಿ (ಅತ್ತಿಗೆ)ಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಅವರ ಮೇಲಿತ್ತು. ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್​​ ಶಿಕ್ಷೆ ಘೋಷಣೆ ಮಾಡಿಯಾದ ಸಂದರ್ಭದಲ್ಲಿ ನ್ಯೂಸ್​18 ಕನ್ನಡದೊಂದಿಗೆ ಮಾತನಾಡಿದ್ದ ದೂರುದಾರೆ ಲಕ್ಷ್ಮೀದೇವಿ ಅವರು, ಅತ್ತಿಗೆ ಹಾಗೂ ಗಂಡ ಮನೆಯಲ್ಲಿ ತಮಗೆ ನೀಡಿದ್ದ ಕಿರುಕುಳದ ಕರಾಳತೆಯನ್ನು ಬಿಚ್ಚಿಟ್ಟಿದ್ದರು.

    MORE
    GALLERIES

  • 79

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ನ್ಯೂಸ್​​18 ಕನ್ನಡದೊಂದಿಗೆ ಮಾತನಾಡಿದ ಲಕ್ಷ್ಮೀದೇವಿ ಅವರು, ನಾನು ಮದುವೆಯಾದ ಬಳಿಕ ಒಂದು ವರ್ಷ ಮಾತ್ರ ಗಂಡನ ಮನೆಯಲ್ಲಿದ್ದೆ. ಆ ವೇಳೆ ನಟಿಯಾಗಿದ್ದರೂ ಅಭಿನಯ ಅವರು ನನಗೆ ಕಿರುಕುಳ ನೀಡುತ್ತಿದ್ದರು ಎಂದು  ಲಕ್ಷ್ಮೀದೇವಿ ಆರೋಪಿಸಿದ್ದರು.

    MORE
    GALLERIES

  • 89

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ವರದಕ್ಷಿಣೆ ತರುವಂತೆ ನಿತ್ಯ ಕಿರುಕುಳ ನೀಡಲಾಗುತ್ತಿತ್ತು. ಮದುವೆಯ ಸಂದರ್ಭದಲ್ಲೇ ಒಂದು ಲಕ್ಷ ರೂಪಾಯಿ ಹಣ, ಚಿನ್ನಾಭರಣವನ್ನು ನಮ್ಮ ತವರು ಮನೆಯವರು ಕೊಟ್ಟಿದ್ದರು ಎಂದಿದ್ದಾರೆ.

    MORE
    GALLERIES

  • 99

    Actress Abhinaya: ಪೊಲೀಸರ ಕೈಗೆ ಸಿಗದ ಅಭಿನಯಗೆ ಸಿಕ್ಕಿತು ಜಾಮೀನು! ವರದಕ್ಷಿಣೆ ಕಿರುಕುಳ ಕೊಟ್ಟಿದ್ದ ನಟಿಗೆ ತಾತ್ಕಾಲಿಕ ರಿಲೀಫ್​

    ಮತ್ತೆ ಮತ್ತೆ ಹಣ ತರಲು ಹೇಳುತ್ತಿದ್ದರು. ಮನೆ ಕಟ್ಟಲು ಹಣ ಬೇಕು ತೆಗೆದುಕೊಂಡು ಬಾ ಅಂತ ಕಿರುಕುಳ ನೀಡುತ್ತಿದ್ದರು. ನನಗೆ ನಟಿ ಅಭಿನಯ ಕೊಲೆ ಬೆದರಿಕೆ ಹಾಕಿದ್ರು ಅಂತ ಲಕ್ಷ್ಮಿದೇವಿ ಆರೋಪಿಸಿದ್ರು.

    MORE
    GALLERIES