Samantha Ruth Prabhu: ಅಳಬೇಡಿ ಸಮಂತಾ, ನಿಮ್ ಜೊತೆ ನಾವಿದ್ದೇವೆ ಎಂದ ಫ್ಯಾನ್ಸ್
ನಟಿ ಸಮಂತಾ ರುಥ್ ಪ್ರಭು ಅವರು ಇತ್ತೀಚೆಗೆ ಶಾಕುಂತಲಂ ಸಿನಿಮಾ ಇವೆಂಟ್ನಲ್ಲಿ ಅತ್ತಿದ್ದು ಸುದ್ದಿಯಾಗಿದೆ. ನಟಿಯ ವಿಡಿಯೋ, ಫೋಟೋಸ್ ವೈರಲ್ ಆಗಿದ್ದೇ ತಡ ಅಭಿಮಾನಿಗಳು ಭಾವುಕರಾಗಿದ್ದಾರೆ.
ನಟಿ ಸಮಂತಾ ರುಥ್ ಪ್ರಭು ಅವರು ಇತ್ತೀಚೆಗೆ ಶಾಕುಂತಲಂ ಟ್ರೈಲರ್ ರಿಲೀಸ್ ಇವೆಂಟ್ನಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಅವರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
2/ 7
ವೈಟ್ & ವೈಟ್ ಔಟ್ಫಿಟ್ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಸಮಂತಾ ಅವರು ಧರಿಸಿದ್ದ ಕನ್ನಡಕ ಮೈನ್ ಅಟ್ರಾಕ್ಷನ್ ಆಗಿತ್ತು. ನಟಿಯ ಕ್ಯೂಟ್ ಸ್ಮೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
3/ 7
ಮಾಧ್ಯಮದ ಮುಂದೆ ಕಾಣಿಸಿಕೊಂಡ ನಟಿ ಸ್ಟೈಲಿಷ್ ಆಗಿ ಕಾಣಿಸಿದ್ದು ಆದರೆ ಕಾರ್ಯಕ್ರಮದ ಮಧ್ಯೆ ಕಣ್ಣೀರಿಟ್ಟ ಘಟನೆ ನಡೆಯಿತು. ಈ ಬಗ್ಗೆ ಅಭಿಮಾನಿಗಳು ಕೂಡಾ ಭಾವುಕರಾಗಿದ್ದಾರೆ.
4/ 7
ಪುಷ್ಪಾ ಸಿನಿಮಾದಲ್ಲಿ ಊ ಅಂಟಾವಾ ಸಾಂಗ್ ಮೂಲಕ ನ್ಯಾಷನಲ್ ಲೆವೆಲ್ಗೆ ಕ್ರೇಜ್ ಹುಟ್ಟಿಸಿಕೊಂಡ ಸಮಂತಾ ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳಿದ್ದಾರೆ.
5/ 7
ಸಮಂತಾ ಅವರು ಶಾಕುಂತಲಂ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಅತ್ತಿದ್ದನ್ನು ನೋಡಿ ಅವರ ಅಭಿಮಾನಿಗಳು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
6/ 7
ನಾರ್ತ್ ಬೆಲ್ಟ್ನಿಂದಲೂ ಅಭಿಮಾನಿಗಳ ಬೆಂಬಲ ಹರಿದುಬಂದಿದೆ. ನೆಟ್ಟಿಗರು ಸಮಂತಾ ಅವರ ಫೋಟೋಗಳಿಗೆ ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.
7/ 7
ನಟಿ ಅಳುತ್ತಿರುವ ಫೋಟೋ ನೋಡಿದ ನೆಟ್ಟಿಗರು ಅಳಬೇಡಿ ಸಮಂತಾ, ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸ್ಟ್ರಾಂಗ್ ಮೆಸೇಜ್ ಕೊಟ್ಟಿದ್ದಾರೆ.