ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗಳು ವಮಿಕಾ ಅವರ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಆದರೆ ಇಬ್ಬರು ಕೂಡಾ ಅಭಿಮಾನಿಗಳಲ್ಲಿ ಮಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡುವಂತೆ ಒತ್ತಾಯಿಸಿದರು. ಸೆಲೆಬ್ರಿಟಿ ಮಕ್ಕಳ ಮುಖವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗುವುದು ಸಹಜ. ಆದರೆ ಸೆಲೆಬ್ರಿಟಿ ಪೋಷಕರು ತಮ್ಮ ಮಕ್ಕಳ ಮುಖವನ್ನು ಯಾಕೆ ಮರೆಮಾಡಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರ ಪ್ರಶ್ನೆ.
ಬೇಬಿ ವಮಿಕಾ ಫೋಟೋ ಆನ್‌ಲೈನ್‌ನಲ್ಲಿ ಲೀಕ್ ಆಗುವ ಮೊದಲು ತಮ್ಮ ಮಗುವಿನ ಫೋಟೋವನ್ನು ಪ್ರಕಟಿಸದೆ ಇದ್ದಿದ್ದಕ್ಕಾಗಿ ಅನುಷ್ಕಾ ಪತ್ರಿಕೆಗಳಿಗೆ ಧನ್ಯವಾದ ಹೇಳಿದ್ದರು. ನಮ್ಮ ಮಗುವಿಗೆ ಗೌಪ್ಯತೆ ಇರಬೇಕೆಂದು ನಾವು ಬಯಸುತ್ತೇವೆ. ಸೋಷಿಯಲ್ ಮೀಡಿಯಾದಿಂದ ಮುಕ್ತವಾಗಿ ವೈಯಕ್ತಿಕ ಜೀವನ ಮಾಡಲು ಆಕೆಗೆ ಅವಕಾಶ ಸಿಗಬೇಕೆಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ನಟಿ ಕೇಳಿಕೊಂಡಿದ್ದರು.
ನಟಿ ಸೋನಂ ಕಪೂರ್ ಕಳೆದ ಆಗಸ್ಟ್‌ನಲ್ಲಿ ಮಗನಿಗೆ ಜನ್ಮ ನೀಡಿದ್ದರು. ಸೋನಂ ಇನ್ನೂ ತನ್ನ ಮಗ ವಾಯುವಿನ ಮುಖವನ್ನು ತೋರಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಗನ ಮುಖವಿರುವ ಫೋಟೋವನ್ನು ಯಾವಾಗ ಹಂಚಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ನಟಿ ಸೋನಂ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೆ, ಅವರು ಸ್ವತಃ ನಿರ್ಧರಿಸುವವರೆಗೂ ಮಗುವಿನ ಮುಖವನ್ನು ಪ್ರಕಟಿಸುದಿಲ್ಲ ಎಂದು ಹೇಳಿದರು.