Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

ಹೆಚ್ಚಿನ ಜನರಿಗೆ ಸಿನೆಮಾ ಮತ್ತು ಕ್ರೀಡಾ ಸೆಲೆಬ್ರಿಟಿಗಳ ಜೀವನ ಶೈಲಿಯ ಮೇಲೆ ಕುತೂಹಲ ಹೆಚ್ಚಿರುತ್ತದೆ. ಹೆಚ್ಚಿನ ಜನರು ಸೆಲೆಬ್ರಿಟಿಗಳು ಬಳಸುವ ಕಾರು, ಡ್ರೆಸ್​, ಸ್ಟೈಲ್​ಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಹೆಚ್ಚಿನ ಸೆಲೆಬ್ರಿಟಿಗಳು ತಾವು ಮೊದಲು ಬಳಸಿದ ಕಾರುಗಳ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರ ಮೇಲೆ ಹೆಚ್ಚು ಗಮನವನ್ನು ಸಹ ನೀಡುತ್ತಾರೆ. ಹಾಗಿದ್ರೆ ಭಾರತದ ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರುಗಳು ಯಾವುದೆಲ್ಲಾ ಎಂದು ಈ ಲೇಖನದಲ್ಲಿ ತಿಳಿಯಿರಿ.

First published:

 • 18

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಭಾರತದ ಜನರು ಹೆಚ್ಚಾಗಿ ಚಲನಚಿತ್ರ ಮತ್ತು ಕ್ರೀಡಾ ಸೆಲೆಬ್ರಿಟಿಗಳನ್ನು ಅನುಸರಿಸುತ್ತಾರೆ. ಅವರು ಸೆಲೆಬ್ರಿಟಿಗಳ ಜೀವನ ಮತ್ತು ಹವ್ಯಾಸಗಳಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಹೆಚ್ಚಿನ ಜನರು ಸೆಲೆಬ್ರಿಟಿಗಳು ಬಳಸುವ ಕಾರು, ಡ್ರೆಸ್​, ಸ್ಟೈಲ್​ಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ.

  MORE
  GALLERIES

 • 28

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಸೆಲೆಬ್ರಿಟಿಗಳು ಸಾಮಾನ್ಯವಾಗಿ ಐಷಾರಾಮಿ ಕಾರುಗಳನ್ನು ಬಳಸುತ್ತಾರೆ. ಐಷಾರಾಮಿ ಕಾರುಗಳನ್ನು ಸ್ಟೇಟಸ್ ಸಿಂಬಲ್ ಎಂದು ಸಹ ಪರಿಗಣಿಸಲಾಗುತ್ತದೆ. ಆದರೆ ಸೆಲೆಬ್ರಿಟಿಗಳು ತಾವು ಮೊದಲು ಬಳಸಿದ ಕಾರುಗಳ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರ ಮೇಲೆ ಹೆಚ್ಚು ಗಮನವನ್ನು ನೀಡುತ್ತಾರೆ. ಹಾಗಿದ್ರೆ ಭಾರತದ ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರುಗಳು ಯಾವುದೆಲ್ಲಾ ಎಂದು ಈ ಲೇಖನದಲ್ಲಿ ತಿಳಿಯಿರಿ.

  MORE
  GALLERIES

 • 38

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಸಲ್ಮಾನ್ ಖಾನ್ - ಟ್ರಯಂಫ್ ಹೆರಾಲ್ಡ್: ಬಾಲಿವುಡ್ ಮಸಲ್ ಹೀರೋ ಎಮದು ಕರೆಯಲ್ಪಡುವ ಸಲ್ಮಾನ್ ಖಾನ್ ಬಳಿ ಪ್ರಸ್ತುತ ಹಲವು ಐಷಾರಾಮಿ ಕಾರುಗಳಿವೆ. ಆದರೆ ಅವರ ಮೊದಲ ಕಾರು ಸವಾರಿ ಸೆಕೆಂಡ್ ಹ್ಯಾಂಡ್ ಟ್ರಯಂಫ್ ಹೆರಾಲ್ಡ್ ಆಗಿತ್ತು. ಈ ಕಾರನ್ನು ಮೊದಲು ರಿಷಿ ಕಪೂರ್ ಸಿನಿಮಾದಲ್ಲಿ ಬಳಸಿದ್ದರು. ಅದರ ನಂತರ ಅದನ್ನು ಸಲೀಂ ಖಾನ್ (ಸಲ್ಮಾನ್ ತಂದೆ) ಗೆ ನೀಡಲಾಯಿತು. ಹಾಗಾಗಿ ಆ ಕಾರನ್ನು ಮೊದಲು ಬಳಸಿದ್ದು ಸಲ್ಮಾನ್ ಖಾನ್.

  MORE
  GALLERIES

 • 48

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಅಕ್ಷಯ್ ಕುಮಾರ್ - ಫಿಯೆಟ್ ಪ್ರೀಮಿಯರ್ ಪದ್ಮಿನಿ: ಅಕ್ಷಯ್​ ಕುಮಾರ್​ ಅವರು ಒಬ್ಬ ಅದ್ಭುತ ಬಾಲಿವುಡ್ ಹೀರೋ. ಇವರು ಹಲವಾರು ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಆದರೆ ವೃತ್ತಿಜೀವನದ ಆರಂಭದಲ್ಲಿ ಅಕ್ಷಯ್ ಕುಮಾರ್ ಮೊದಲು ಬಳಸಿದ್ದು ಫಿಯೆಟ್ ಪದ್ಮಿನಿ ಕಾರನ್ನು. ಈ ಕಾರನ್ನು 1964 - 2001 ರ ನಡುವೆ ದೇಶದಲ್ಲಿ ತಯಾರಿಸಲಾಯಿತು.

  MORE
  GALLERIES

 • 58

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಶಾರುಖ್ ಖಾನ್ - ಮಾರುತಿ ಓಮ್ನಿ : ಬಾದ್‌ಶಾ, ಕಿಂಗ್ ಖಾನ್ ಎಂದು ಕರೆಯಲ್ಪಡುವ ಶಾರುಖ್ ಖಾನ್ ಬಾಲಿವುಡ್‌ನ ದೊಡ್ಡ ಸಿನೆಮಾದ ನಾಯಕ. ಈ ಬಾದ್‌ಶಾ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಯಕನಾಗಿ ವೃತ್ತಿಜೀವನದ ಆರಂಭದಲ್ಲಿ ಕಿಂಗ್ ಖಾನ್ ಅವರ ಮೊದಲ ಕಾರು ಮಾರುತಿ ಓಮ್ನಿ. ಈ ಕಾರನ್ನು ಅವರ ತಾಯಿ ಉಡುಗೊರೆಯಾಗಿ ಶಾರುಖ್ ಅವರಿಗೆ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಶಾರುಖ್ ಖಾನ್ ಇಷ್ಟಪಟ್ಟಿದ್ದಾರೆ. ಇದನ್ನು ಶಾರುಖ್​ ಅವರ ಅತ್ಯಮೂಲ್ಯ ಆಸ್ತಿ ಎಂದು ಪರಿಗಣಿಸಲಾಗಿದೆ.

  MORE
  GALLERIES

 • 68

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಅಮಿತಾಬ್ ಬಚ್ಚನ್-ಫಿಯೆಟ್ 1100: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರು ಗೊತ್ತಿಲ್ಲದವರೇ ಇಲ್ಲ. ತಮ್ಮ ನಟನೆಯಿಂದ ಎಲ್ಲರ ಮನಸೆಳೆಯುತ್ತಾರೆ. ಅವರ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಬಿಗ್​ ಬಿ ಅಮಿತಾಬ್ ಬಳಸಿದ ಕಾರು ಫಿಯೆಟ್ 1100. ಅವರು ಅದನ್ನು ಸೆಕೆಂಡ್ ಹ್ಯಾಂಡ್ ಕಾರಾಗಿ ಖರೀದಿಸಿದರು.

  MORE
  GALLERIES

 • 78

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಸಚಿನ್ ತೆಂಡೂಲ್ಕರ್ - ಮಾರುತಿ 800: ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ಕ್ರಿಕೆಟ್​ನಲ್ಲಿ ಬಹಳ ಜನಪ್ರಿಯ ಆಟಗಾರ. ಮಾಸ್ಟರ್ ಬ್ಲಾಸ್ಟರ್ ಎಂದೇ ಜನಪ್ರಿಯವಾಗಿರುವ ಸಚಿನ್ ಬಳಿ 360 ಮೊಡೆನಾ ಫೆರಾರಿ ಎಂಬ ಐಷಾರಾಮಿ ಕಾರು ಇದೆ. ಇದನ್ನು ಸಚಿನ್‌ಗೆ ಮೈಕೆಲ್ ಶುಮಾಕರ್ ಅವರು ಉಡುಗೊರೆಯಾಗಿ ನೀಡಿದ್ದರು. ಆದರೆ ಸಚಿನ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾರುತಿ 800 ಅನ್ನು ತಮ್ಮ ಮೊದಲ ಕಾರಾಗಿ ಓಡಿಸುತ್ತಿದ್ದರು.

  MORE
  GALLERIES

 • 88

  Celebs First Cars: ಸಚಿನ್‌ನಿಂದ ಶಾರುಖ್‌ವರೆಗೆ, ಸೆಲೆಬ್ರಿಟಿಗಳು ಬಳಸಿದ ಮೊದಲ ಕಾರು ಯಾವುದು ಗೊತ್ತಾ?

  ಜನಪ್ರಿಯ ಸಿನೆಮಾ ನಟಿಯಾಗಿರುವ ಸಾರಾ ಅಲಿ ಖಾನ್ ಅವರ ಮೊದಲ ಕಾರು ಬಿಳಿ ಬಣ್ಣವನ್ನು ಹೊಂದಿದೆ. ಇದು ಹಳೆಯ ತಲೆಮಾರಿನ ಹೋಂಡಾ ಸಿಆರ್-ವಿ ಎಂಬ ಹೆಸರದ್ದಾಗಿದೆ. ಇದು 2.4-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಂದಿದೆ.

  MORE
  GALLERIES