ರಾಮ್ ಗೋಪಾಲ್ ವರ್ಮಾ ಅವರು 1962 ರಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕೃಷ್ಣರಾಜ ಮತ್ತು ಸೂರ್ಯಮ್ಮ ದಂಪತಿಗೆ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸಿಕಂದರಾಬಾದ್ನ ಸೇಂಟ್ ಮೇರಿಸ್ ಹೈಸ್ಕೂಲ್ನಲ್ಲಿ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ವಿಜಯವಾಡದ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದರು. ಆದರೆ, ವರ್ಮಾ ಅವರಿಗೆ ವಿದ್ಯಾಭ್ಯಾಸಕ್ಕಿಂತ ಸಿನಿಮಾಗಳತ್ತ ಹೆಚ್ಚಿನ ಆಸಕ್ತಿ ಇತ್ತು.