ಇತ್ತೀಚೆಗಷ್ಟೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ದಿವ್ಯಾ, ಇವನಿಂದ ಅನೇಕರು ಮೋಸ ಹೋಗಿದ್ದಾರೆ ಎಂದ್ರು. ನಿಮಗೆ ಈ ಮಗು ಬೇಡ ಎಂದು ಅನೇಕರು ಸಲಹೆ ನೀಡಿದ್ರು. ಆದ್ರೆ ಯಾವುದೇ ಜೀವಿಯನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ದೇವರು ಕೊಟ್ಟ ಈ ಮಗುವಿಗೆ ಜನ್ಮ ನೀಡಬೇಕೆಂದುಕೊಂಡೆ. ನಾನು 4 ತಿಂಗಳ ಗರ್ಭಿಣಿಯಾಗಿದ್ದ ವೇಳೆ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆದರೆ ನನ್ನ ಜೀವನದಲ್ಲಿ ಕಹಿ ಘಟನೆಗಳು ನಡೆದು ಹೋಗಿದೆ.