ಹಿರಿಯ ನಟಿ ಜಯಂತಿ ಅವರ ಜೊತೆಗಿನ ಮಗನ ಜೊತೆಗೆ ಡಿವೋರ್ಸ್ ಬಳಿಕ ನಾನು ನನ್ನ ತಾಯಿ ಮನೆಯಲ್ಲಿದೆ. ನನ್ನ ಜೀವನದಲ್ಲಿ ನೆಗೆಟಿವ್ ಅಂತ ಹುಡುಕಿದರೆ ಸಿಗುವ ಮೊದಲ ವಿಚಾರವೇ ನನ್ನ ಡಿವೋರ್ಸ್.ನೆಗೆಟಿವ್ ಕಾಮೆಂಟ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಬೇಕು. ಕೃಷ್ಣ ಕುಮಾರ್ ಅವರನ್ನು ಮದುವೆ ಆದ್ಮೇಲೆ ಸಿನಿಮಾ ಮಾಡೋದನ್ನು ನಿಲ್ಲಿಸ ಬಾರದು ಎಂದು ಜಯಂತಿ ಅಮ್ಮನವರು ಹೇಳಿದ್ದರು.
ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದಾರಾ ಅನ್ನೋ ಪ್ರಶ್ನೆಗಳೆಲ್ಲಾ ತೀರಾ ನನ್ನ ಪರ್ಸನಲ್ ವಿಚಾರ. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ ಎಂದು ಅನು ಪ್ರಭಾಕರ್ ಹೇಳಿದ್ದಾರೆ.