ಸ್ಟಾರ್ ಸುವರ್ಣ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿದೆ. ಒಳ್ಳೆಯ ಸೀರಿಯಲ್ ಗಳ ಮೂಲಕ ಜನರನ್ನು ಸೆಳೆದಿದೆ. ಅಲ್ಲದೇ ಗಾನ ಬಜಾನಾ ಸೇರಿ ಹಲವು ರಿಯಾಲಿಟಿ ಶೋ ಗಳು ಜನರಿಗೆ ಹತ್ತಿರವಾಗಿವೆ.
2/ 8
ಹಲವು ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿರೋ ಸ್ಟಾರ್ ಸುವರ್ಣ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅದರ ಮೂಲಕ ಮಕ್ಕಳನ್ನು ರಂಜಿಸುವ ಪ್ರಯತ್ನ ಮಾಡ್ತಾ ಇದೆ.
3/ 8
ಹೌದು ಸ್ಟಾರ್ ಸುವರ್ಣದಲ್ಲಿ ಶೀಘ್ರದಲ್ಲೇ ಡಿಸ್ನಿ ಮೂವೀಸ್ ಪ್ರಸಾರವಾಗದಲಿದೆ. ಅದು ಕನ್ನಡದಲ್ಲಿ. ನಿಮ್ಮ ಮಕ್ಕಳು ಖುಷಿಯಿಂದ ನೋಡಿ ಎಂಜಾಯ್ ಮಾಡಬಹುದು.
4/ 8
ಡಿಸ್ನಿ ಮೂವೀಸ್ ಅಂದ್ರೆ ಮಕ್ಕಳಿಗೆ ಪ್ರಾಣ. ಅದನ್ನು ನೋಡುತ್ತಾ ಟಿವಿ ಮುಂದೆ ಕೂತ್ರೆ, ಮೇಲೆ ಏಳಿಸುವುದೇ ಕಷ್ಟ. ಅದು ಬೇರೆ ಭಾಷೆಯಲ್ಲಿ ಬಂದಾಗಲೇ ಅಷ್ಟು ಅಟ್ರ್ಯಾಕ್ಟ್ ಮಾಡುತ್ತಿದೆ.
5/ 8
ಡಿಸ್ನಿ ಮೂವೀಸ್ ಕನ್ನಡದಲ್ಲಿ ಇದ್ರೆ ಎಷ್ಟು ಚೆಂದ ಇರ್ತಿತ್ತು ಅಲ್ವಾ ಎಂದುಕೊಂಡಿರ್ತಾರೆ ಬಹಳ ಮಂದಿ. ಎಸ್ ಅದು ಈಗ ಆಗ್ತಿದೆ. ಡಿಸ್ನಿ ಮೂವೀಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
6/ 8
ಅದರ ಪ್ರೋಮೋವನ್ನು ಸ್ಟಾರ್ ಸುವರ್ಣ ತಂಡದವರು ಬಿಟ್ಟಿದ್ದಾರೆ. ದಿ ಗುಡ್ ಡೈನೋಸಾರ್ ಶೀಘ್ರದಲ್ಲೇ ಪ್ರಸಾರವಾಗಲಿದೆ. ಕೇಳೋಕೆ ಕುತೂಹಲವಾಗ್ತಿದೆ. ಇನ್ನು ನೋಡಲು ಎಷ್ಟು ಚೆನ್ನಾಗಿರಬಹುದು ಅಲ್ವಾ?
7/ 8
ಅಲ್ಲದೇ ಎಲ್ಲಾ ಪ್ರಾಣಿಗಳು ಕನ್ನಡ ಕಲಿಯುತ್ತಿದ್ದಾವಂತೆ. ಅದು ಸ್ಟಾರ್ ಸುವರ್ಣಗೆ ಬರಲು. ಪ್ರೋಮೋ ನೋಡಿ ಈಗಾಗಲೇ ಮಕ್ಕಳು ಅದನ್ನು ನೋಡಲು ಕಾಯ್ತಾ ಇದ್ದಾರೆ.
8/ 8
ಮಕ್ಕಳಿಗೆ ಮೊದಲೇ ಪ್ರಾಣಿಗಳಂದ್ರೆ ತುಂಬಾ ಇಷ್ಟ. ಆ ಪ್ರಾಣಿಗಳು ನಮ್ಮ ಮಾತೃಭಾಷೆಯಲ್ಲಿ ಮಾತನಾಡಿದ್ರೆ ಸೂಪರ್ ಆಗಿರುತ್ತೆ. ಅದಕ್ಕೆ ಇದೊಂದು ಹೊಸ ಪ್ರಯತ್ನವಾಗಿದೆ.