PHOTOS: ಹಣ್ಣಾದ ಗಡ್ಡ, ಹೆಗಲಲ್ಲಿ ಟವೆಲ್, ಬಾಯಲ್ಲಿ ಬೀಡಿ; 'ಬೆಲ್​ಬಾಟಂ'ಗಾಗಿ 'ಮರಕುಟುಕ'ನಾದ ಯೋಗರಾಜ ಭಟ್

ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ಬಣ್ಣ ಹಚ್ಚುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಇದು ರೆಟ್ರೋ ಕಥೆಯನ್ನೇ ಹೊಂದಿದೆ. ರಿಷಭ್ ಈ ಚಿತ್ರದಲ್ಲಿ ಪತ್ತೇದಾರಿಯ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೂಡ ಬಣ್ಣ ಹಚ್ಚಲಿದ್ದಾರೆ ಎಂಬುದು ಈ ಮೊದಲೇ ಗೊತ್ತಾಗಿತ್ತು. ಈಗ ಚಿತ್ರತಂಡ ಅವರ ಲುಕ್ ಹೇಗಿರಲಿದೆ ಎಂಬುದನ್ನು ಅನಾವರಣಗೊಳಿಸಿದೆ. ‘ಬೆಲ್ ಬಾಟಂ’ನಲ್ಲಿ ಭಟ್ಟರು ‘ಮರಕುಟುಕ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಯಿಗೆ ಬೀಡಿ ಇಟ್ಟುಕೊಂಡು, ಕಪ್ಪು-ಬಿಳಿ ಮಿಶ್ರಿತ ಗಡ್ಡದೊಂದಿಗೆ, ಹಳ್ಳಿಯ ಮರಕಡಿಯುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯೋಗರಾಜ ಭಟ್ಟರ ಹೊಸ ಲುಕ್​ನ ಝಲಕ್ ಇಲ್ಲಿವೆ...

  • News18
  • |
First published: