Pushpa Nude scenes: `ಪುಷ್ಪ’ ಚಿತ್ರದಲ್ಲಿರಬೇಕಿತ್ತಂತೆ ಅಲ್ಲು ಅರ್ಜುನ್ ಬೆತ್ತಲೆ ದೃಶ್ಯಗಳು.. ನಿರ್ದೇಶಕ ಸುಕುಮಾರ್ ಹೀಗೆ ಹೇಳಿದ್ಯಾಕೆ?
Pushpa Nude scenes: ಸುಕುಮಾರ್ ಅವರು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹದ್ ಫಾಜಿಲ್ ಅವರಂತಹ ಇಬ್ಬರು ದೊಡ್ಡ ನಟರನ್ನು ಬೆತ್ತಲೆಯಾಗಿ ತೋರಿಸಲು ಬಯಸಿದ್ದರಂತೆ. ಈ ದೃಶ್ಯಗಳು ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಹೈಲೈಟ್ ಆಗಿವೆ. ಆದರೆ, ಶಾರ್ಟ್ಸ್ ಹಾಕಿಸಿ ಶೂಟ್ ಮಾಡಿಸಿದ್ದರಂತೆ.
ಬಹುನಿರೀಕ್ಷಿತ ಸಿನಿಮಾ ಪುಷ್ಪ(Pushpa) ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಡಿಸೆಂಬರ್ 17ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ದೊರಕಿದೆ. ಪಾಸಿಟಿವ್ ರಿಯಾಕ್ಷನ್ಗಿಂತ, ನೆಗೆಟಿವ್(Negative) ರಿಯಾಕ್ಷನ್ ಹೆಚ್ಚಿದೆ.
2/ 6
ಈ ಸಿನಿಮಾದಲ್ಲಿ ಬರುವ ಕೆಲವು ದೃಶ್ಯಗಳ ಬಗ್ಗೆ ಪ್ರೇಕ್ಷಕರು ವಿಶೇಷವಾಗಿ ಮಾತನಾಡುತ್ತಿದ್ದಾರೆ. ಸಿನಿಮಾ ಏನೇ ಇರಲಿ.. ಕೆಲವು ದೃಶ್ಯಗಳನ್ನು ಅದ್ಭುತವಾಗಿ ಡಿಸೈನ್ ಮಾಡಿದ್ದಾರೆ ನಿರ್ದೇಶಕ ಸುಕುಮಾರ್. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಬರುವ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ರಂಥ ಸ್ಟಾರ್ಗಳೇ ಶಾರ್ಟ್ಸ್ ಹಾಕಿಕೊಂಡಿದ್ದರು.
3/ 6
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿದೆ. ಇನ್ನೂ ಇದೆ ವೇಳೆ ಸುಕುಮಾರ್ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
4/ 6
ಸುಕುಮಾರ್ ಅವರು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹದ್ ಫಾಜಿಲ್ ಅವರಂತಹ ಇಬ್ಬರು ದೊಡ್ಡ ನಟರನ್ನು ಬೆತ್ತಲೆಯಾಗಿ ತೋರಿಸಲು ಬಯಸಿದ್ದರಂತೆ. ಈ ದೃಶ್ಯಗಳು ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಹೈಲೈಟ್ ಆಗಿವೆ. ಆದರೆ, ಶಾರ್ಟ್ಸ್ ಹಾಕಿಸಿ ಶೂಟ್ ಮಾಡಿಸಿದ್ದರಂತೆ
5/ 6
ಫಹಾದ್ ಮತ್ತು ಅಲ್ಲು ಅರ್ಜುನ್ ಇಬ್ಬರೂ ಶಾರ್ಟ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯವನ್ನು ಸುಕುಮಾರ್ ಮೊದಲು ಬರೆದ ರೀತಿಯೇ ಬೇರೆ. ಈ ದೃಶ್ಯದಲ್ಲಿ ಬನ್ನಿ ಮತ್ತು ಫಹದ್ ಫಾಜಿಲ್ ಇಬ್ಬರೂ ಬೆತ್ತಲೆಯಾಗಿದ್ದರು ಎಂದು ಸುಕುಮಾರ್ ಬರೆದಿದ್ದಾರೆ. ಬಳಿಕ ಸೀನ್ ಚೇಂಜ್ ಮಾಡಿದ್ದರಂತೆ
6/ 6
ಸೂಪರ್ ಸ್ಟಾರ್ ನಟರನ್ನು ಬೆತ್ತಲೆ ತೊರಿಸುವುದು ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ ಎಂದು ಸೀನ್ ಚೇಂಜ್ ಮಾಡಿದ್ದರಂತೆ. . ಭಾಗ 2ರಲ್ಲೂ ಕುತೂಹಲಕಾರಿ ದೃಶ್ಯಗಳು ಇರುತ್ತವೆ ಎನ್ನುತ್ತಾರೆ ನಿರ್ದೇಶಕರು. ಮೊದಲ ಭಾಗದಲ್ಲಿ ಪಾತ್ರಗಳ ಪರಿಚಯವಷ್ಟೇ.. ಎರಡನೇ ಭಾಗದಲ್ಲಿ ಮೂಲ ಕಥೆ ಇರಲಿದೆ ಎಂದು ಹೇಳಿದ್ದಾರೆ.