ಕರುನಾಡಿನತ್ತ ದೇಶಕ್ಕೆ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕಾಂತಾರ. ನಿರ್ದೇಶನ ಮಾಡಿ, ನಟಿಸಿರುವ ರಿಷಬ್ ಶೆಟ್ಟಿಗೆ ಹೆಸರು ತಂದು ಕೊಟ್ಟಿದೆ.
2/ 8
ರಿಷಬ್ ಶೆಟ್ಟಿ ಅಂದ್ರೆ ಈಗ ಎಲ್ಲೆಡೆ ಗುರುತಿಸುವ ನಿರ್ದೇಶಕರಾಗಿದ್ದಾರೆ. ಅವರೊಳಗೆ ಒಬ್ಬ ಅತ್ಯುತ್ತಮ ಕಲಾವಿದ ಇದ್ದಾರೆ ಎನ್ನುವುದನ್ನು ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ.
3/ 8
ರಿಷಬ್ ಶೆಟ್ಟಿ ತಮ್ಮ 7 ವರ್ಷದ ಹಿಂದಿನ ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ. 'ರಿಕ್ಕಿ' ಅನ್ನೊ ನನ್ನ ಸಿನಿಮಾದ ಕನಸು ರೆಕ್ಕೆ ಬಿಚ್ಚಿ ಹಾರಿ ಇವತ್ತಿಗೆ ಏಳು ವರ್ಷ. ನಿರ್ದೆಶಕನಾಗಿ ನನ್ನ ಪಯಣ ಶುರುವಾಗಿದ್ದೆ 'ರಿಕ್ಕಿ'ಯಿಂದ ಎಂದಿದ್ದಾರೆ.
4/ 8
ಅಂದು ಶುರುವಾದ ನನ್ನ ಪಯಣದ ಪಿಸುಮಾತು ಇಷ್ಟೆ, "ಸೂರಿನ ಸುಖವಿಲ್ಲ. ನಿದ್ದೆಯ ಕನಸಿಲ್ಲ. ಬಾ ಸಾಥಿ. ನಮ್ಮ ಗುರಿಯೊಂದೇ" ಎಂದು ರಿಷಬ್ ಶೆಟ್ಟಿ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ರಿಕ್ಕಿ ಚಿತ್ರ ತುಂಬಾ ಸಾಹಸ ಸಿನಿಮಾ ಆಗಿತ್ತು. ತುಂಬಾ ಸಂತೋಷ ಕೊಟ್ಟ ಸಿನಿಮಾ ರಿಕ್ಕಿ. ರಿಕ್ಕಿಯಿಂದ ಇಲ್ಲಿಯವರೆಗೆ ನನ್ನ ಪಯಣ ಸಾಗಿ ಬಂದಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.
6/ 8
2016ರಲ್ಲಿ ರಿಕ್ಕಿ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಭಾರತದಲ್ಲಿ ನಕ್ಸಲಿಸಂನ ವ್ಯಾಪಕತೆ ಹೇಗಿದೆ ಎಂಬುದು ಕಥೆಯಲ್ಲಿದೆ.
7/ 8
ರಿಕ್ಕಿ ಸಿನಿಮಾ ನೋಡಿ ಹಲವರು ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಸಹ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ರು. ರಕ್ಷಿತ್ ಶೆಟ್ಟಿ ಸಹ ಅದ್ಭುತವಾಗಿ ನಟಿಸಿದ್ದರು.
8/ 8
7 ವರ್ಷಗಳಲ್ಲಿ ರಿಷಬ್ ಶೆಟ್ಟಿ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಕಾಂತಾರ ಅವರನ್ನು ಬೇರೆ ಲೆವೆಲ್ಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದೆ.