Jogi Prem: ಸಾಮಾಜಿಕ ಜಾಲತಾಣದಲ್ಲಿ ಜೋಗಿ ಜಾತ್ರೆ: ಅಭಿಮಾನಿಗಳ ಸಂಭ್ರಮಕ್ಕೆ ಜೊತೆಯಾದ ನಿರ್ದೇಶಕ ಪ್ರೇಮ್..!
Jogi Jaatre: ಸ್ಯಾಂಡಲ್ವುಡ್ನಲ್ಲಿ ಜೋಗಿ ಪ್ರೇಮ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಪ್ರೇಮ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜೋಗಿ ಜಾತ್ರೆ ಎಂಬ ಹೆಸರಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಇದಕ್ಕೆ ಪ್ರೇಮ್ ಸಹ ಜೊತೆಯಾಗಿದ್ದಾರೆ. (ಚಿತ್ರಗಳು ಕೃಪೆ: ಪ್ರೇಮ್ಸ್ ಟ್ವಿಟರ್ ಖಾತೆ)
ಸ್ಯಾಂಡಲ್ವುಡ್ ನಿರ್ದೇಶಕ ಜೋಗಿ ಪ್ರೇಮ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಆಚರಿಸುತ್ತಿದ್ದಾರೆ.
2/ 16
ಅದೇ ಜೋಗಿ ಜಾತ್ರೆ. ಈ ಹಬ್ಬಕ್ಕೆ ಈಗ ನಿರ್ದೇಶಕ ಪ್ರೇಮ್ ಸಹ ಜೊತೆಯಾಗಿದ್ದಾರೆ.
3/ 16
ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾ ತೆರೆ ಕಂಡು ನಾಳೆ ಅಂದರೆ ಆ.19ಕ್ಕೆ 15 ವರ್ಷಗಳಾಗುತ್ತವೆ.
4/ 16
ಅದಕ್ಕಾಗಿ ಅಭಿಮಾನಿಗಳು ಜೋಗಿ ಜಾತ್ರೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಅದಕ್ಕಾಗಿಯೇ ಈ ಕಾಮನ್ ಡಿಪಿ ಸಹ ರಿಲೀಸ್ ಮಾಡಿದ್ದಾರೆ.
5/ 16
ಜೋಗಿ ಜಾತ್ರೆ ಕುರಿತಾಗಿ ಟ್ವೀಟ್ ಮಾಡಿರುವ ನಿರ್ದೇಶಕ ಪ್ರೇಮ್, ಸಾವೇ ಬಂದರೂ, ಮಣ್ಣೇ ಆದರೂ, ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ ಎಂದು ಜೋಗಿ ಸಿನಿಮಾ ಹಾಡಿನ ಸಾಲನ್ನೇ ಕೊಂಚ ಬದಲಾಯಿಸಿ ಬರೆದಿದ್ದಾರೆ.
6/ 16
ನಾಳೆ ಸಂಜೆ 5ಕ್ಕೆ ಪ್ರೇಮ್, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ಲೈವ್ ಬರಲಿದ್ದಾರೆ.
7/ 16
ಲೈವ್ನಲ್ಲಿ ಪ್ರೇಮ್ ಜೋಗಿ ಸಿನಿಮಾ ಕುರಿತು ಮಾತನಾಡಲಿದ್ದು, 15 ವರ್ಷದ ಸಂಭ್ರಮವನ್ನು ಹಂಚಿಕೊಳ್ಳಲಿದ್ದಾರೆ.
8/ 16
ಹಂಸಲೇಖ ಹಾಗೂ ಪ್ರೇಮ್
9/ 16
ಏಕಲವ್ಯಾ ಸಿನಿಮಾದ ಡಬ್ಬಿಂಗ್ನಲ್ಲಿ ತೆಗೆದ ಚಿತ್ರದಲ್ಲಿ ಪ್ರೇಮ್