Happy Birthday Prem: ಹೊಸ ಸಿನಿಮಾಗೆ ನಾಯಕರಾದ ಪ್ರೇಮ್: ರಿಲೀಸ್ ಆಯ್ತು ಗೌಡ್ರ ಪೋಸ್ಟರ್..! Jogi Prem: ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಊಟಿಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಪ್ರೇಮ್. ನಿರ್ದೇಶಕನಿಗೆ ಬರ್ತ್ ಡೇ ಗಿಫ್ಟ್ ಆಗಿ ಹೊಸ ಸಿನಿಮಾ ಪ್ರಕಟಿಸಲಾಗಿದೆ. (ಚಿತ್ರಗಳು ಕೃಪೆ: ಪ್ರೇಮ್ ಇನ್ಸ್ಟಾಗ್ರಾಂ ಖಾತೆ)
1 / 7
ನಿರ್ದೇಶಕ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಅವರ ಬರ್ತ್ ಡೇ ಗಿಫ್ಟ್ ಆಗಿ ಹೊಸ ಸಿನಿಮಾ ಒಂದನ್ನು ಅನೌನ್ಸ್ ಮಾಡಲಾಗಿದೆ.
2 / 7
ಎಂಎಸ್ಆರ್ ಪ್ರೊಡಕ್ಷನ್ಸ್ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಪ್ರೇಮ್ ನಾಯಕರಾಗಿದ್ದಾರೆ.
3 / 7
ಇನ್ನೂ ಈ ಸಿನಿಮಾದ ಟೈಟಲ್ ಫಿಕ್ಸ್ ಮಾಡಿಲ್ಲ. ಆದರೆ ಅವರ ಪೋಸ್ಟರ್ ಅನ್ನು ಚಿತ್ರತಂಡ ಪ್ರಡಕ್ಷನ್ ನಂ 2 ಹೆಸರಲ್ಲಿ ರಿಲೀಸ್ ಮಾಡಲಾಗಿದೆ.
4 / 7
ಅಕ್ಷಯ್ ಸಮರ್ಥ್ ನಿರ್ಮಿಸುತ್ತಿರುವ ಈ ಸಿನಿಮಾಗೆ ಎಷ್. ವಿಜಯ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
5 / 7
ಇನ್ನು ಗಾಂಧಿಗಿರಿ ಸಿನಿಮಾದಲ್ಲೂ ಪ್ರೇಮ್ ನಟಿಸುತ್ತಿದ್ದಾರೆ.
6 / 7
ಇವುಗಳ ಜೊತೆಗೆ ಪ್ರೇಮ್ ಅಭಿನಯದ ಕೇಡಿ ಕಿಷ್ಣ ಚಿತ್ರತಂಡ ಸಹ ಒಂದು ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲೂ ಪ್ರೇಮ್ ಅವರದ್ದೇ ಲೀಡ್ ರೋಲ್.
7 / 7
ಈ ಹಿಂದೆಯೇ ಪ್ರಕವಾಗಿಟ್ಟ ಐ ಆ್ಯಮ್ ಕಲ್ಕಿ ಸಿನಿಮಾದ ತಂಡ ಸಹ ಇದು ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.
First published: October 22, 2020, 12:37 IST