ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
2/ 11
ಪ್ರಭಾಸ್ ಸಿನಿಮಾ ಸಲಾರ್ ಅನ್ನು ನಿರ್ದೇಶನ ಮಾಡುತ್ತಿರುವ ನೀಲ್ ಸದ್ಯ ಫ್ರೀಯಾಗುವ ಯಾವ ಲಕ್ಷಣ ಕೂಡಾ ಕಾಣಿಸುತ್ತಿಲ್ಲ. ಈ ಸಿನಿಮಾ ಆದ ಕೂಡಲೇ ನೀಲ್ ಅವರಿಗೆ ಕೆಲಸದ ಲಿಸ್ಟ್ ಸಿದ್ಧವಾಗಿದೆ.
3/ 11
ಸಲಾರ್ ಸಿನಿಮಾ ಮುಗಿದ ಕೂಡಲೇ ಜೂನಿಯರ್ ಎನ್ಟಿಆರ್ ಅವರಿಗೆ ಪ್ರಶಾಂತ್ ನೀಲ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿಯೊಂದು ಬಹಳಷ್ಟು ದಿನಗಳಿಂದ ಓಡಾಡುತ್ತಿದೆ.
4/ 11
ತ್ರಿಬಲ್ ಆರ್ ಸಿನಿಮಾ ಮೂಲಕ ಭಾರೀ ಖ್ಯಾತಿ ಗಿಟ್ಟಿಸಿಕೊಂಡಿರುವ ಜೂನಿಯರ್ ಎನ್ಟಿಆರ್ ಅವರ ಮೆಗಾ ಪ್ರಾಜೆಕ್ಟ್ಗೆ ನೀಲ್ ಅವರು ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಆದರೆ ಅದರ ನಂತರವೂ ಪ್ರಶಾಂತ್ ನೀಲ್ ಫ್ರೀ ಆಗೋ ಯಾವ ಲಕ್ಷಣವೂ ಕಂಡುಬರುತ್ತಿಲ್ಲ.
5/ 11
ಇದಕ್ಕೆ ಕಾರಣ ಏನಪ್ಪಾ ಅಂದ್ರೆ ಪ್ರಶಾಂತ್ ನೀಲ್ ಅವರು ಮತ್ತೊಂದು ಸಿನಿಮಾ ಡೈರೆಕ್ಟ್ ಮಾಡಲಿದ್ದಾರಂತೆ. ತೆಲುಗಿನಲ್ಲಿ ಎರಡು ಪ್ರಾಜೆಕ್ಟ್ ಮುಗಿಸಿ ನೀಲ್ ಕೆಜಿಎಫ್ ಅಖಾಡಕ್ಕೆ ಬರ್ತಾರೆ ಎಂದು ನಿರೀಕ್ಷಿಸುತ್ತಿದ್ದ ಕನ್ನಡಿಗರಿಗೆ ನಿರಾಸೆ ಆಗಿದೆ.
6/ 11
ಪ್ರಶಾಂತ್ ನೀಲ್ ಅವರು ಸಲಾರ್ ಮುಗಿಸಿ, ನಂತರ ಜೂನಿಯರ್ ಎನ್ಟಿಆರ್ ಸಿನಿಮಾ ಮುಗಿಸಿ ನಂತರ ಮತ್ತೆ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರಂತೆ. ಅಲ್ಲಿಗೆ ತೆಲುಗಿನಲ್ಲಿ ಭರ್ಜರಿ 3 ಪ್ರಾಜೆಕ್ಟ್ನಲ್ಲಿ ಕೆಜಿಎಫ್ ಡೈರೆಕ್ಟರ್ ಬ್ಯುಸಿಯಾಗಲಿದ್ದಾರೆ.
7/ 11
ಈ ವಿಚಾರ ಬರೀ ಗಾಸಿಪ್ ಅಲ್ಲ. ಬದಲಾಗಿ ನಿರ್ಮಾಪಕ ದಿಲ್ರಾಜು ಅವರೇ ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ ಕೆಜಿಎಫ್ 3 ಸಿನಿಮಾ ಸದ್ಯಕ್ಕೆ ಮಾಡಲ್ಲ ಎಂದು ತಿಳಿಸಿದ್ದಾರೆ.
8/ 11
ಇತ್ತೀಚೆಗಷ್ಟೇ ನ್ಯೂಸ್18 ಕನ್ನಡ ಡಿಜಿಟಲ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದ ಹೊಂಬಾಳೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು 2025ರಲ್ಲಿ ಕೆಜಿಎಫ್ 3 ಸೆಟ್ಟೇರುತ್ತೆ. 2026ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಿದ್ದರು.
9/ 11
ಸಲಾರ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್ಟಿಆರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದು ಆ ಎರಡು ಪ್ರಾಜೆಕ್ಟ್ ಮುಗಿಸಿ ನೀಲ್ ಬರುತ್ತಾರೆ ಎಂದು ಹೇಳಿದ್ದರು.
10/ 11
ಆದರೆ ಈಗ ದಿಲ್ರಾಜು ಕೊಟ್ಟಿರೋ ಹೇಳಿಕೆ ಎಲ್ಲಾ ಲೆಕ್ಕಾಚಾರವನ್ನೂ ತಲೆಗೆಳಗಾಗಿಸಿದೆ. ಕೆಜಿಎಫ್ 3 ಬಿಡುಗಡೆ ಇನ್ನಷ್ಟು ವಿಳಂಬವಾಗುವ ಲಕ್ಷಣ ಕಂಡುಬಂದಿದೆ.
11/ 11
ಪ್ರಶಾಂತ್ ನೀಲ್ ಬ್ಯಾಕ್ ಟು ಬ್ಯಾಕ್ 3 ಪ್ರಾಜೆಕ್ಟ್ ತೆಲುಗಿನಲ್ಲಿಯೇ ಮಾಡುತ್ತಿರುವುದು ಕನ್ನಡ ಸಿನಿಪ್ರಿಯರಿಗೆ ಸ್ವಲ್ಪ ಬೇಸರ ತಂದಿದೆ. ಆದರೆ ವಿಜಯ್ ಕಿರಗಂದೂರು ಅವರು ಇತ್ತೀಚೆಗೆ ಕೊಟ್ಟ ಕೆಜಿಎಫ್ 3 ಹೇಳಿಕೆಗೆ ದಿಲ್ರಾಜು ಬೇಕೆಂದೇ ಈ ಥರ ಹೇಳಿಕೆ ಕೊಟ್ಟಿದ್ದಾರಾ ಎನ್ನುವುದು ನೆಟ್ಟಿಗರ ಚರ್ಚೆ.