Hrithik Roshan: ಪತ್ನಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿರುವ ಈ ಬಾಲಿವುಡ್ ನಟಿನಿಗೆ ಒಂದು ಕಾಲದಲ್ಲಿ 30 ಸಾವಿರ ಮದುವೆ ಪ್ರಪೋಸಲ್ ಬಂದಿತ್ತಂತೆ..!
ಬಾಲಿವುಡ್ ಹಂಕ್ ಹಾಗೂ ಸದಾ ಗ್ರೀಕ್ ದೇವತೆಗಳಿಗೆ ಹೋಲಿಕೆ ಮಾಡಲಾಗುವ ನಟ ಎಂದರೆ ಅದು ಹೃತಿಕ್ ರೋಷನ್. ಯಾವ ಹಾಲಿವುಡ್ ನಟನಿಗೂ ಕಡಿಮೆ ಇಲ್ಲದ ಈ ನಟನ ವೃತ್ತಿ ಹಾಗೂ ಖಾಸಗಿ ಜೀವನಕ್ಕೆ ಸಂಬಂಧ ಪಟ್ಟ ಸಾಕಷ್ಟು ವಿಷಯಗಳು ತುಂಬಾ ಜನರಿಗೆ ಗೊತ್ತಿಲ್ಲ. ಅವುಗಳಲ್ಲಿ ಅವರ ಮೊದಲ ಸಿನಿಮಾ ರಿಲೀಸ್ ಆದಂತಹ ಸಮಯದಲ್ಲಿ ನಡೆದ ಕೆಲವು ಘಟನೆಗಳೂ ಸಹ ಇವೆ. ಹೌದು, ಇಂದು ಪತ್ನಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿರುವ ಹೃತಿಕ್ ರೋಷನ್ಗೆ ಒಂದು ಕಾಲದಲ್ಲಿ 30 ಸಾವಿರ ಮದುವೆ ಪ್ರಪೋಸಲ್ಗಳು ಬಂದಿದ್ದವಂತೆ. (ಚಿತ್ರಗಳು ಕೃಪೆ: ಹೃತಿಕ್ ರೋಷನ್ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ ಸೂಪರ್ ಹೀರೋ ಹೃತಿಕ್ ರೋಷನ್ ಅವರನ್ನು ಗ್ರೀಕ್ ದೇವತೆಗಳಿಗೆ ಹೋಲಿಸಲಾಗುತ್ತದೆ. ಅಲ್ಲದೆ ಹೃತಿಕ್ ಯಾವ ಹಾಲಿವುಡ್ ಹೀರೋಗೂ ಕಡಿಮೆ ಇಲ್ಲ ಎಂದೂ ಹೇಳಲಾಗುತ್ತದೆ. ಇಂತಹ ನಟನ ವೈಯಕ್ತಿಕ ಜೀವನದ ಕುರಿತಾದ ಆಸಕ್ತಿಕರ ವಿಚಾರವೊಂದು ನಿಮಗಾಗಿ.
2/ 11
ಕಹೋನಾ ಪ್ಯಾರ್ ಹೈ ಸಿನಿಮಾದ ಮೂಲಕ ಬಾಲಿವುಡ್ಗೆ ನಾಯಕನಾಗಿ ಪರಿಚಯವಾದರು ಹೃತಿಕ್ ರೋಷನ್.
3/ 11
ತಂದೆ ರಾಕೇಶ್ ರೋಷನ್ ನಿರ್ದೇಶನದಲ್ಲಿ ಮೂಡಿ ಬಂದ ಕಹೋ ನಾ ಪ್ಯಾರ್ ಹೈ ಸಿನಿಮಾದಿಂದಾಗಿಯೇ ಹೃತಿಕ್ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದರು.
4/ 11
ಕಹೋ ನಾ ಪ್ಯಾರ್ ಹೈ ಸಿನಿಮಾದ ನಂತರ ಹೃತಿಕ್ ಅವರಿಗೆ ಬರೋಬ್ಬರಿ 30 ಸಾವಿರ ಮದುವೆ ಪ್ರಪೋಸಲ್ ಬಂದಿತ್ತಂತೆ.
5/ 11
ತಮಗೆ ಬಂದಿದ್ದ ಮದುವೆ ಪ್ರಪೋಸಲ್ ಕುರಿತಾಗಿ ಹೃತಿಕ್ ಕಪಿಲ್ ಶರ್ಮಾ ಅವರ ಕಾಮಿಡಿ ಶೋನಲ್ಲಿ ಈ ಹಿಂದೆ ಹೇಳಿಕೊಂಡಿದ್ದಾರೆ.
6/ 11
ತಮ್ಮ ಸಿನಿಮಾವೊಂದರ ಪ್ರಚಾರಕ್ಕಾಗಿ ಕಪಿಲ್ ಶರ್ಮಾರ ಕಾಮಿಡಿ ಶೋಗೆ ಬಂದಿದ್ದಾಗ ಈ ವಿಷಯ ಹೇಳಿಕೊಂಡಿದ್ದರು.
7/ 11
ಬಾಲ್ಯದ ಗೆಳತಿ ಸುಸೈನ್ ಖಾನ್ ಅವರನ್ನು ವಿವಾಹವಾಗಿ ಎರಡು ಮಕ್ಕಳಾದ ನಂತರ ಕೆಲವು ಕಾರಣಗಳಿಂದಾಗಿ ಈ ಜೋಡಿ ವಿಚ್ಛೇದನ ಪಡೆಯಿತು.
8/ 11
ಹೃತಿಕ್ ರೋಷನ್ ಅವರು ವಿಚ್ಛೇದನ ಪಡೆದ ನಂತರ ಕಂಗನಾ ಜೊತೆ ನಟನ ಹೆಸರು ತಳುಕು ಹಾಕಿಕೊಂಢಿತ್ತು. ಇವರಿಬ್ಬರ ಸಂಬಂಧದ ಬಗ್ಗೆ ಈ ಹಿಂದೆ ಸಾಕಷ್ಟು ಸಲ ಕಂಗನಾ ಸಹ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
9/ 11
ಇನ್ನು ವಿಚ್ಛೇದನದ ನಂತರವೂ ಹೃತಿಕ್ ರೋಷನ್ ಹಾಗೂ ವಿಚ್ಛೇದಿತ ಪತ್ನಿ ಸುಸೈನ್ ಖಾನ್ ಮಕ್ಕಳಿಗಾಗಿ ಆಗಾಗ ಭೇಟಿಯಾಗುತ್ತಿದ್ದರು. ಆದರೆ ಕೊರೋನಾ ಲಾಕ್ಡೌನ್ ವೇಳೆ ಸುಸೈನ್ ಮಕ್ಕಳೊಂದಿಗೆ ಹೃತಿಕ್ ಜೊತೆ ಇರಲು ಬಂದಿದ್ದರು. ಈ ವಿಷಯ ಕೇಳಿದ ಕೂಡಲೇ ಹೃತಿಕ್ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸಿದ್ದರು.
10/ 11
ಹೃತಿಕ್ ರೋಷನ್ ಸದ್ಯ ಕ್ರಿಷ್ 4 ಹಾಗೂ ಫೈಟರ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
11/ 11
ಫೈಟರ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.