ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ತಮನ್ನಾ ಭಾಟಿಯಾ ಕಮೆಂಟ್ ಮಾಡಿದ್ದಾರೆ. ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗೆ ಅನಿಲ್ ರವಿಪುಡಿ ಸರ್ ಜೊತೆ ಕೆಲಸ ಮಾಡುವುದು ಇಷ್ಟ. ನಂದಮೂರಿ ಬಾಲಕೃಷ್ಣ ಸರ್ ಹಾಗೂ ಅನಿಲ್ ರವಿಪುಡಿ ಬಗ್ಗೆ ನನಗೆ ತುಂಬಾ ಗೌರವ ಇದೆ. ಹಾಗಾಗಿ ನನ್ನ ಕುರಿತು ಹಾಗೂ ಅವರ ಸಿನಿಮಾದ ಒಂದು ಹಾಡಿನ ಕುರಿತು ಈ ರೀತಿ ಆಧಾರ ರಹಿತ ಸುದ್ದಿ ಓದುವುದು ತುಂಬಾ ನೋವಾಗುತ್ತದೆ. ಆರೋಪಗಳನ್ನು ಮಾಡುವ ಮುನ್ನ ಸತ್ಯ ತಿಳಿದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ ನಟಿ.