Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

Salaar: ಪ್ರಶಾಂತ್ ನೀಲ್ ದಿಢೀರ್ ಟ್ವಿಟರ್​ನಿಂದ ದೂರವಾದರು. ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತಗೊಂಡಿದ್ದೇಕೆ ಸ್ಟಾರ್ ಡೈರೆಕ್ಟರ್? ಇದಕ್ಕೆ ನೆಟ್ಟಿಗರೇ ಕಾರಣವೇ?

First published:

  • 17

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಪ್ರಭಾಸ್ ಅವರ ಮುಂದಿನ ಸಿನಿಮಾ ಸಲಾರ್ ಸೌತ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಒಂದೊಂದು ಚಿಕ್ಕ ಅಪ್ಡೇಟ್​ಗಾಗಿಯೂ ಜನರು ಕಾಯುತ್ತಿದ್ದಾರೆ. ಎಷ್ಟರ ಮಟ್ಟಿಗೆಂದರೆ ಜನರ ಅಪ್ಡೇಟ್ ಪ್ರಶ್ನೆ ಕೇಳಿ ಚಿತ್ರತಂಡವೇ ಬೇಜಾರಾಗಿದೆ.

    MORE
    GALLERIES

  • 27

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಹೌದು. ಇಂಥದ್ದೊಂದು ಸುದ್ದಿ ಕೇಳಿ ಬಂದಿದೆ. ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೆಲವು ತಿಂಗಳ ಹಿಂದೆಯೇ ಟ್ವಿಟರ್​ನಿಂದ ದೂರ ಸರಿದಿದ್ದಾರೆ. ತಮ್ಮ ಟ್ವಿಟರ್ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದಾರೆ.

    MORE
    GALLERIES

  • 37

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಇದಕ್ಕೆ ಅಭಿಮಾನಿಗಳೇ ಕಾರಣ ಎನ್ನಲಾಗುತ್ತಿದೆ. ಸಿನಿಮಾ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗಲಿದ್ದು, ಇದೇ ಕಾರಣದಿಂದ ಅಭಿಮಾನಿಗಳು ಕ್ಷಣ ಕ್ಷಣದ ಮಾಹಿತಿಗಾಗಿ ಕಾಯುತ್ತಲೇ ಇದ್ದಾರೆ. ಇದರ ಪರಿಣಾಮ ಸಿನಿ ಪ್ರಿಯರೆಲ್ಲರೂ ಪದೇ ಪದೇ ಸಿನಿಮಾದ ಅಪ್ಡೇಟ್​ಗಳನ್ನು ಕೇಳುತ್ತಲೇ ಇದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಚಿತ್ರದ ನಿರ್ದೇಶಕರೇ ಸುಸ್ತಾಗಿದ್ದಾರೆ.

    MORE
    GALLERIES

  • 47

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ವರದಿಗಳ ಪ್ರಕಾರ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಅವರು ಜನರ ಪ್ರಶ್ನೆಗಳಿಂದ ಸುಸ್ತಾಗಿದ್ದಾರಂತೆ. ಅದಕ್ಕಾಗಿಯೇ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 57

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಇದುವರೆಗೂ ಚಿತ್ರತಂಡ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಶೇರ್ ಮಾಡಿಲ್ಲ. ಇದಷ್ಟೇ ಅಲ್ಲದೆ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟಿಲ್ಲ ಎಂದು ನೆಟ್ಟಿಗರು ಚಿತ್ರತಂಡವನ್ನು ತುಂಬಾ ಟ್ರೋಲ್ ಮಾಡಿದ್ದರು. ನಿರ್ದೇಶಕ ನೀಲ್ ಹಾಗೂ ನಿರ್ಮಾಪಕರನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದರು.

    MORE
    GALLERIES

  • 67

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಕೆಲವು ದಿನಗಳ ಹಿಂದೆ ಸಲಾರ್ ಸಿನಿಮಾದ ರಿಲೀಸ್ ಡೇಟ್ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗಿತ್ತು. ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಜೂನ್​ನಲ್ಲಿ ಆದಿಪುರುಷ್ ಸಿನಿಮಾ ಬಿಡುಗಡೆಯಾಗುವುದರಿಂದ ಇದರ ಸ್ವಲ್ಪ ಅಂತರದಲ್ಲಿ ಸಲಾರ್ ರಿಲೀಸ್ ಆದರೆ ಬಾಕ್ಸ್ ಆಫೀಸ್​ ಕಲೆಕ್ಷನ್ ಮೇಲೆ ಪರಿಣಾಮ ಆಗುತ್ತದೆ ಎಂಬ ಚರ್ಚೆಯೂ ಕೇಳಿ ಬಂದಿತ್ತು.

    MORE
    GALLERIES

  • 77

    Prashant Neel: ಸಲಾರ್ ಅಪ್ಡೇಟ್ ಕೇಳಿ ತಲೆ ತಿಂತಾರಾ ಜನ? ನೀಲ್ ಟ್ವಿಟರ್ ಬಿಡೋಕೆ ಇದೇನಾ ಕಾರಣ?

    ಶ್ರುತಿ ಹಾಸನ್ ಈ ಸಿನಿಮಾದ ಹೀರೋಯಿನ್. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಜಗಪತಿ ಬಾಬು, ಮಧು ಗುರುಸ್ವಾಮಿ, ಈಶ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಸೆಪ್ಟೆಂಬರ್ 28, 2023ರಂದು ಬಿಡುಗಡೆಯಾಗಲಿದೆ.

    MORE
    GALLERIES