ಜುಲೈ15ರಂದು ಟ್ವೀಟ್ ಮಾಡಿದ್ದ ಧ್ರುವ ಸರ್ಜಾ , ತಮಗೆ ಕೊರೋನಾ ವೈರಸ್ ಇರುವುದನ್ನು ಖಚಿತಪಡಿಸಿದ್ದರು. ಕೊರೋನಾ ಲಕ್ಷಣಗಳು ಇದ್ದಿದ್ದರಿಂದ ನಾವು ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಮಾಡಿಸಿ ಮನೆಯಲ್ಲೇ ಇರಿ," ಎಂದು ಧ್ರುವ ಕೋರಿದ್ದರು.