Junior Chiru: ಚಿಕ್ಕಪ್ಪ ಧ್ರುವ ಜೊತೆ ಜೂನಿಯರ್ ಸರ್ಜಾ: ಇಲ್ಲಿವೆ ಕ್ಯೂಟ್ ಫೋಟೋಗಳು..!
ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅಂದುಕೊಂಡಂತೆಯೇ ಜೂನಿಯರ್ ಚಿರು ಎಂಟ್ರಿ ಆಗಿದೆ. ಮಗುವಿನ ಜನನದಿಂದ ಮೇಘನಾ ಹಾಗೂ ಚಿರು ಸರ್ಜಾ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇಲ್ಲಿವೆ ಜೂನಿಯರ್ ಚಿರು ಕ್ಯೂಟ್ ಫೋಟೋಗಳು.
ವೈದ್ಯರು ಡೇಟ್ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
2/ 7
ಚಿರು ಅಗಲಿಕೆಯಿಂದ ನೋವಿನಲ್ಲಿದ್ದ ಮೇಘನಾ ಹಾಗೂ ಸರ್ಜಾ ಕುಟುಂಬದ ಮೊಗದಲ್ಲಿ ಖುಷಿ ಮೂಡಿಸಿದ್ದಾನೆ ಈ ಜೂನಿಯರ್ ಸರ್ಜಾ.
3/ 7
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಜೂನಿಯರ್ ಸರ್ಜಾ ಜನನವಾಗಿದೆ.
4/ 7
ಚಿಕ್ಕಪ್ಪ ಧ್ರುವ ಅವರು ಅಣ್ಣ ಚಿರು ಅವರ ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
5/ 7
ಮೇಘನಾ ಅವರಿಗೆ ಗಂಡು ಮಗುವಿನ ಜನನವಾದ ಸುದ್ದಿಯನ್ನು ಧ್ರುವ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
6/ 7
ಮೇಘನಾ ಸರ್ಜಾ ಹಾಗೂ ಅವರ ಕುಟುಂಬದವರು ಈಗಾಗಲೇ ಆಸ್ಪತ್ರೆಗೆ ಹೋದ ಬೆನ್ನಲ್ಲೇ ಜೂನಿಯರ್ ಚಿರುಗಾಗಿ ಕಾಯುತ್ತಿರುವ ಚಿಕ್ಕಪ್ಪ ಧ್ರುವ, ಅಣ್ಣನ ಮಗುವಿಗಾಗಿ ಭರ್ಜರಿ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಂಡಿದ್ದರು.
7/ 7
ಅಣ್ಣನ ಮಗನಿಗಾಗಿ 10 ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ಹಾಗೂ ಚಿನ್ನ ಬಟ್ಟಲನ್ನು ಖರೀದಿಸಿದ್ದಾರೆ.
First published:
17