Dhruva Sarja: ನರ್ತಕಿ ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ಪೊಗರು ಸಿನಿಮಾ ವೀಕ್ಷಿಸಿದ ಧ್ರುವ ಸರ್ಜಾ..!
ಇಂದು ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ಪೊಗರು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿದೆ. ಊಹಿಸಿದ್ದಕ್ಕಿಂತ ಹೆಚ್ಚಾಗಿಯೇ ಈ ಸಿನಿಮಾಗೆ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರಮಂದಿರಗಳತ್ತ ಹೆಜ್ಜೆ ಹಾಕಲು ಹಿಂದೆ ಮುಂದೆ ನೋಡುತ್ತಿರುವಾಗಲೂ ಪೊಗರು ಸಿನಿಮಾದ ಬೆಳಗಿನ ಶೋಗಳಲ್ಲಿ ಬಹುತೇಕ ಹೌಸ್ ಫುಲ್ ಆಗಿದೆ. ಹೀಗಿರುವಾಗಲೇ ಧ್ರುವ ಸರ್ಜಾ, ಚಂದನ್ ಶೆಟ್ಟಿ , ನಿರ್ದೇಶಕ ನಂದ ಕಿಶೋರ್ ಹಾಗೂ ಪೊಗರು ಚಿತ್ರತಂಡ ನರ್ತಕಿ ಚಿತ್ರಮಂದಿರಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.