ಇನ್ನು ಈ ಸಿನಿಮಾದ ಥಿಯೇಟ್ರಿಕಲ್ ಬ್ಯುಸಿನೆಸ್ ವಿಚಾರಕ್ಕೆ ಬಂದರೆ ತೆಲುಗಿನ ಈ ಸಿನಿಮಾ ಮೊದಲ ದಿನವೇ ಎಪಿ ತೆಲಂಗಾಣದಲ್ಲಿ ಒಟ್ಟು 5.5 ಕೋಟಿ ಬ್ಯುಸಿನೆಸ್ ಮಾಡಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಬೇಕಾದರೆ 6 ಕೋಟಿ ಶೇರ್ ಬೇಕು. ತಮಿಳಿನಲ್ಲಿ 35 ಕೋಟಿ ವರೆಗೂ ವ್ಯಾಪಾರ ಮಾಡಿದೆ ಎನ್ನಲಾಗ್ತಿದೆ. ಧನುಷ್ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ 415 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಫೋಟೋ: ಟ್ವಿಟರ್
ನಮ್ಮ ದೇಶದಲ್ಲಿ ಶಿಕ್ಷಣ ಎನ್ನುವುದು ಲಾಭದಾಯಕವಲ್ಲದ ಸೇವೆ ಎಂಬ ಕಥೆಯನ್ನು ಆಧರಿಸಿದೆ. ಗುಣಮಟ್ಟದ ಶಿಕ್ಷಣ ಬೇಕಾದರೆ ಹಣ ಖರ್ಚು ಮಾಡಬೇಕು. ಹಣ ಇರುವವನು ಡಿಗ್ರಿ ಖರೀದಿಸುತ್ತಾರೆ. ಹಣ ಕಡಿಮೆ ಇರುವವನು ಸಾಲ ಮಾಡಿದರೂ ಸಿಗಲ್ಲ. ದೇಶದಾದ್ಯಂತ ಶಿಕ್ಷಣವನ್ನು ವ್ಯಾಪಾರವಾಗಿ ಪರಿವರ್ತಿಸಿದವರ ವಿರುದ್ಧ ಸಾಮಾನ್ಯ ಸ್ಕೂಟ್ ಟೀಚರ್ ಮತ್ತು ಕೆಲವು ಕಾರ್ಪೊರೇಟ್ಗಳ ನಡುವೆ ನಡೆಯುವ ಹೋರಾಟವಾಗಿದೆ. ಫೋಟೋ: ಟ್ವಿಟರ್
ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ಹೇಗೆ ಆಳುತ್ತಿವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.. ಈ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳ ವಿರುದ್ಧ ತಿರುಗಿ ಬಿದ್ದ ಒಬ್ಬ ಸಾಮಾನ್ಯ ಶಿಕ್ಷಕನ ಅನುಭವಗಳೇ ಈ ಸಿನಿಮಾದ ಕಥೆ. ಅದರಲ್ಲೂ ವಿದ್ಯೆ ಎಂಬುದು ದೇವರ ಗುಡಿಯಲ್ಲಿ ನೈವೇದ್ಯವಿದ್ದಂತೆ, ಆದ್ರೆ ಅದನ್ನು ಈಗ ಪಂಚತಾರಾ ಹೋಟೆಲಿನಲ್ಲಿರುವ ತಿನಿಸಿನಂತೆ ಮಾರುತ್ತಿದ್ದೇನೆ ಎಂದು ಧನುಷ್ ಹೇಳುವ ಡೈಲಾಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.