ಧನುಷ್ ತನ್ನ ಪೋಷಕರಿಗೆ ಚೆನ್ನೈನಲ್ಲಿ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಫೋಟೋದಲ್ಲಿ ನಟ ಧನುಷ್ ಹಾಗೂ ಅವರ ತಂದೆ-ತಾಯಿಯನ್ನು ಕಾಣಬಹುದಾಗಿದೆ. ಕುಟುಂಬ ಸಮೇತ ನಟ ಧನುಷ್ ಇತ್ತೀಚೆಗೆ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿ ನಿರ್ಮಿಸಲಾಗಿರುವ ತಮ್ಮ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಧನುಷ್ ತಮ್ಮ ಮುಂದಿನ ಚಿತ್ರಕ್ಕಾಗಿ ಅರುಣ್ ಮಾಥೇಶ್ವರನ್ ಅವರೊಂದಿಗೆ 'ಕ್ಯಾಪ್ಟನ್ ಮಿಲ್ಲರ್' ಚಿತ್ರಕ್ಕಾಗಿ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದಲ್ಲಿ ಧನುಷ್, ಪ್ರಿಯಾಂಕಾ ಅರುಲ್ ಮೋಹನ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಅವರ ಮುಂದಿನ ಚಿತ್ರಕ್ಕೂ ಧನುಷ್ ಸಹಿ ಹಾಕಿದ್ದಾರೆ. ಅವರು ತಮ್ಮ ಹೆಸರಿಡದ ಚಿತ್ರ 'ಡಿ 50' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.