ಎರಡು ದಿನಗಳ ಹಿಂದೆ, ಕಾಲಿವುಡ್ ಹೀರೋ ಧನುಷ್ ಮತ್ತು ಅವರ ಪತ್ನಿ, ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಧನುಷ್, ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು ಸಿನಿಪ್ರೇಮಿಗಳು ಹಾಗೂ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಎರಡು ದಿನಗಳ ಹಿಂದೆ ಜಂಟಿ ಹೇಳಿಕೆಯ ಮೂಲಕ ತಾವು ದೂರ ಆಗುತ್ತಿರುವುದಾಗಿ ಹೇಳಿದ್ದಾರೆ.