Rathnan Prapancha: ಕೈಯಲ್ಲಿ ಮಲ್ಲಿಗೆ ಹೂವು, ಪೆಪ್ಪರ್ಮಿಂಟ್ ಹಿಡಿದು ರತ್ನನ್ಪ್ರಪಂಚಕ್ಕೆ ಕಾಲಿಟ್ಟ ಧನಂಜಯ್..!
Dhananjaya: ವರಮಹಾಲಕ್ಷ್ಮಿ ಹಬ್ಬಕ್ಕೆ ನಟ ಧನಂಜಯ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಅವರ ಹೊಸ ಸಿನಿಮಾದ ಕುರಿತಾದ ಪ್ರಕಟಣೆ ಜೊತೆಗೆ ಪೋಸ್ಟರ್ ಅನ್ನೂ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಧನಂಜಯ್ ಇನ್ಸ್ಟಾಗ್ರಾಂ ಖಾತೆ)
News18 Kannada | July 31, 2020, 5:29 PM IST
1/ 10
ವರಮಹಾಲಕ್ಷ್ಮಿ ಹಬ್ಬದಂದು ಡಾಲಿ ಧನಂಜಯ್ ಕೈಯಲ್ಲಿ ಮಲ್ಲಿಗೆ ಹೂ ಹಾಗೂ ಪೆಪ್ಪರ್ಮಿಂಟ್ ಹಿಡಿದು ಹೊರಟಿದ್ದಾರೆ.
2/ 10
ಹೌದು, ಇದು ಡಾಲಿ ಧನಂಜಯ್ ಅಭಿನಯಿಸುತ್ತಿರುವ ಹೊಸ ಸಿನಿಮಾ ರತ್ನನ್ಪ್ರಪಂಚದ ಪೋಸ್ಟರ್.
3/ 10
ಅಭಿಮಾನಿಗಳಿಗಾಗಿ ಹಬ್ಬದಂದು ಈ ಸಿನಿಮಾದ ಪೋಸ್ಟರ್ ಜೊತೆಗೆ, ಚಿತ್ರದ ಕುರಿತಾದ ಮಾಹಿತಿ ಸಹ ನೀಡಿದ್ದಾರೆ.
ಅಜನೀಶ್ ಲೋಕ್ನಾಥ್ ಸಂಗೀತ ನೀಡಲಿರುವ ಈ ಸಿನಿಮಾವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಲಿದ್ದಾರೆ.
6/ 10
ರತ್ನಾಕರನ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.
7/ 10
ಕೆ.ಆರ್.ಜಿ. ಸ್ಟುಡಿಯೋಸ್ನ ಮೊದಲ ಸಿನಿಮಾ ಇದಾಗಿದೆ.
8/ 10
ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
9/ 10
ಕೈಯಲ್ಲಿ ಹೂ ಹಾಗೂ ಪೆಪ್ಪರ್ ಮಿಂಟ್ ಹಿಡಿದು, ಏನನ್ನೋ ಯೋಚಿಸುತ್ತಾ ನಗುತ್ತಾ ಜನಜಂಗುಳಿ ಇರುವ ರಸ್ತೆಯಲ್ಲಿ ನಾಯಕ ಹೋಗುತ್ತಿರುವುದನ್ನು ನೋಡಿದರೆ, ಇದು ಕೌಟುಂಬಿಕ ಕಥಾಹಂದರ ಇರುವ ಚಿತ್ರ ಎಂದು ಹೇಳಬಹುದಾಗಿದೆ.
10/ 10
ಇದರ ಹೊರತಾಗಿ ಧನಂಜಯ್, ಶಿವರಾಜ್ಕುಮಾರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.