ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಖ್ಯಾತ ಬ್ಯಾನರ್. ಅದೇ ಪುಷ್ಪಕ ವಿಮಾನ ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಣ ಸಂಸ್ಥೆ. ಈಗಾಗಲೇ ಡಾಲಿ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ಕೂಡ ಮುಗಿಸಿದ್ದಾರಂತೆ.
ಸ್ಯಾಂಡಲ್ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಪುಷ್ಪಕ ವಿಮಾನ ಚಿತ್ರ ಖ್ಯಾತಿಯ ನಿರ್ದೇಶಕ ಎಸ್ ರವೀಂದ್ರನಾಥ್ ಜೊತೆಗೂಡಲಿದ್ದಾರೆ ಎಂಬ ಸುದ್ದಿಯೊಂದಿದೆ.
2/ 13
ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಖ್ಯಾತ ಬ್ಯಾನರ್. ಅದೇ ಪುಷ್ಪಕ ವಿಮಾನ ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಣ ಸಂಸ್ಥೆ. ಈಗಾಗಲೇ ಡಾಲಿ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ಕೂಡ ಮುಗಿಸಲಾಗಿದೆಯಂತೆ.
3/ 13
ರವೀಂದ್ರನಾಥ್ ಹೇಳಿರುವ ಕಥೆ ಕೂಡ ನಟ ರಾಕ್ಷಸನಿಗೆ ಮೆಚ್ಚುಗೆಯಾಗಿದ್ದು, ಈ ಸಿನಿಮಾ ಶೂಟಿಂಗ್ ಅನುಮತಿ ಸಿಕ್ಕ ಬೆನ್ನಲ್ಲೇ ಸೆಟ್ಟೇರಲಿದೆ ಎನ್ನಲಾಗಿದೆ.
4/ 13
ಇದರೊಂದಿಗೆ ಇದೇ ಮೊದಲ ಬಾರಿ ಡಾಲಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
5/ 13
ನಟಿ ರಚಿತಾ ರಾಮ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಚಿತ್ರತಂಡ, ಶೀಘ್ರದಲ್ಲೇ ಡಿಂಪಲ್ ಕ್ವೀನ್ಗೆ ಕಥೆ ಹೇಳಲಿದ್ದಾರೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
6/ 13
ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿ ಸ್ಯಾಂಡಲ್ವುಡ್ನಲ್ಲಿ ಘರ್ಜಿಸುತ್ತಿರುವ ಡಾಲಿ ಧನಂಜಯ್ಗೆ, ಕನ್ನಡದ ಟಾಪ್ ನಟಿ ಜೋಡಿಯಾಗುತ್ತಿರುವುದು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
7/ 13
ಇನ್ನು ಈ ಚಿತ್ರದ ಕಥೆಯೇನು, ಉಳಿದ ತಾರಾಬಳಗ ಯಾರು ಎಂಬಿತ್ಯಾದಿ ಮಾಹಿತಿಗಳು ಮಾತ್ರ ಹೊರಬಿದ್ದಿಲ್ಲ. ಆದರೂ ಕೇವಲ ಡಾಲಿ-ಡಿಂಪಲ್ ಸುದ್ದಿಯೊಂದಿಗೆ ಮತ್ತೊಂದು ಭರ್ಜರಿ ಹಿಟ್ ಸಿನಿಮಾ ನೀಡುವ ಸೂಚನೆ ನೀಡಿದ್ದಾರೆ ನಿರ್ದೇಶಕ ರವೀಂದ್ರನಾಥ್.
8/ 13
ಏತನ್ಮಧ್ಯೆ ಡಾಲಿ ಬೆಂಗಳೂರು ಭೂಗತ ಜಗತ್ತಿನ ಮೊದಲ ಡಾನ್ ಜಯರಾಜ್ ಜೀವನಾಧಾರಿತ ಚಿತ್ರದ ತಯಾರಿಯಲಿದ್ದು, ಅದರೊಂದಿಗೆ ಡಾಲಿ ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
9/ 13
ಇತ್ತ ಕಡೆ ಡಿಂಪಲ್ ಕ್ವೀನ್ ಮೋಡಿ ಮಾಡಲು ಟಾಲಿವುಡ್-ಕಾಲಿವುಡ್ನತ್ತ ಕೂಡ ಮುಖ ಮಾಡಿದ್ದಾರೆ. ಅದರೊಂದಿಗೆ ರಚಿತಾ ರಾಮ್ ಅಭಿನಯದ ಕನ್ನಡ ಚಿತ್ರಗಳಾದ ಏಪ್ರಿಲ್, ವೀರಂ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿ ನಿಂತಿದೆ.