'ಕಿಸ್' ಸಿನಿಮಾ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ 'ಭರಾಟೆ' ಆರ್ಭಟ ಭರ್ಜರಿಯಾಗಿಯೇ ಆರಂಭವಾಗಿದೆ. ಈ ಎರಡೂ ಚಿತ್ರಕ್ಕೂ ಒಬ್ಬಳೇ ನಾಯಕಿ. ಹೌದು, ಕಿಸ್ ಚಿತ್ರದ ಮೂಲಕ ಕಿಸ್ಮತ್ ಕನೆಕ್ಷನ್ನ ಕಹಾನಿ ತಿಳಿಸಿದ ಶ್ರೀಲೀಲಾ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
2/ 21
ಮೊದಲ ಚಿತ್ರದಲ್ಲೇ ಅತ್ಯುತ್ತಮವಾಗಿ ನಟಿಸಿ ಸೈ ಎನಿಸಿಕೊಂಡಿರುವ ಮುದ್ದು ಮುಖದ ಶ್ರೀಲೀಲಾ ಸ್ಯಾಂಡಲ್ವುಡ್ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಇನ್ನು ಭರಾಟೆ ತೆರೆಕಂಡರೆ ಶ್ರೀಲೀಲಾ ಅವರ ಲಕ್ ಬದಲಾಗಲಿದೆ ಎಂಬ ಮಾತುಗಳು ಸಹ ಗಾಂಧಿನಗರದಲ್ಲಿದೆ.
3/ 21
ಈಗಾಗಲೇ ಶ್ರೀಮುರಳಿ-ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ ಭರಾಟೆ ಸಿನಿಮಾದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಂಡವರಲ್ಲಿ ನಟ ಭಯಂಕರ ಡಾಲಿ ಧನಂಜಯ್ ಕೂಡ ಒಬ್ಬರು.
4/ 21
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾಲಿ, ಚೇತನ್ ಡೈರೆಕ್ಷನ್ ಅಂದರೇನೇ ಭರ್ಜರಿಯಾಗಿರುತ್ತದೆ. ಇನ್ನು ಚಿತ್ರದಲ್ಲಿ ರೋರಿಂಗ್ ಸ್ಟಾರ್ ಇದ್ದಾರೆ. ಆಗ ಘರ್ಜನೆ ಕೂಡ ಜೋರಾಗಿ ಇರುತ್ತದೆ. ಭರಾಟೆ ತಂಡಕ್ಕೆ ಶುಭವಾಗಲಿ...
5/ 21
ಚೇತನ್ ಅವರು ಯಾವ ಕಾಲೇಜಿನಲ್ಲಿ ಓದಿದ್ದಾರೆ ಎಂದು ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ಮಾತ್ರ ಕಡಿಮೆ ಇದ್ದಾರೆ. ಗಂಡುಮಕ್ಕಳ ಜೊತೆ ಹೆಣ್ಣುಮಕ್ಕಳನ್ನು ಇಂಥ ಕಾರ್ಯುಕ್ರಮಕ್ಕೆ ಕರೆಸಿದರೆ ಸಂಭ್ರಮ ಇನ್ನು ಚೆನ್ನಾಗಿರುತ್ತದೆ ಎಂದರು. ಅಲ್ಲದೆ...
6/ 21
ಹಾಗೆಯೇ ಭರಾಟೆ ಸಿನಿಮಾ ನಾಯಕಿ ತುಂಬಾ ಮುದ್ದಾಗಿದ್ದಾರೆ ಎಂದು ಕೇಳಿದ್ದೆ, ನಾನು ಕೂಡ ನೋಡೋಣ ಅಂದು ಒಡೋಡಿ ಬಂದೆ. ಆದರೆ ...
7/ 21
ಇಲ್ಲಿ ನೋಡಿದ್ರೆ ಎಲ್ಲೂ ಕಾಣಿಸ್ತಾನೆ ಇಲ್ವಲ್ಲ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
8/ 21
ಸದ್ಯ ಡಾಲಿ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದರೊಂದಿಗೆ ತಮ್ಮದೇ ಪ್ರೊಡಕ್ಷನ್ ಹೌಸ್ನಲ್ಲಿ ಮೂಡಿ ಬರುತ್ತಿರುವ ಬಡವ ರಾಸ್ಕಲ್ ಚಿತ್ರದ ತಯಾರಿಯಲ್ಲಿದ್ದಾರೆ.