ಸಾಥ್ ನಿಭಾನ ಸಾಥಿಯಾದಿಂದ ಗೋಪಿ ಬಹು ಎಂದು ಜನಪ್ರಿಯವಾಗಿರುವ ನಟಿ ದೆವೋಲೀನಾ ಭಟ್ಟಾಚಾರ್ಯ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. Instagramನಲ್ಲಿ ವಿವಾಹ ಪೋಸ್ಟ್ ಹಂಚಿಕೊಂಡ ನಟಿ ಪತಿ ಶಾನವಾಜ್ ಶೇಖ್ ಅವರೊಂದಿಗಿನ ಫೋಟೋಸ್ ಹಂಚಿಕೊಂಡಿದ್ದಾರೆ.
2/ 7
ನಟಿ ಆನ್ಲೈನ್ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರು ನಗುತ್ತಿರುವುದನ್ನು ಕಾಣಬಹುದು. ದೆವೋಲೀನಾ ತನ್ನ ಪತಿ ಶಾನವಾಜ್ಗಾಗಿ ತನ್ನ ಪೋಸ್ಟ್ನಲ್ಲಿ ಹೃದಯಸ್ಪರ್ಶಿ ಕ್ಯಾಪ್ಶನ್ ಬರೆದಿದ್ದಾರೆ. ಅಭಿಮಾನಿಗಳ ಜೊತೆಗೆ ಆಕೆಯ ಸೆಲೆಬ್ರಿಟಿ ಸ್ನೇಹಿತರು ಕಾಮೆಂಟ್ ವಿಭಾಗದಲ್ಲಿ ಮೆಸೇಜ್ ಮಾಡಿ ಶುಭ ಹಾರೈಸಿದ್ದಾರೆ.
3/ 7
ದೆವೋಲೀನಾ ಇತ್ತೀಚೆಗೆ ಶಾನವಾಜ್ ಅವರನ್ನು ವಿವಾಹವಾದರು. ಚಿತ್ರದಲ್ಲಿ, ದೆವೋಲೀನಾ ಬ್ರೈಡಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೈಗಳನ್ನು ಗೋರಂಟಿ ಅಲಂಕರಿಸಿತ್ತು. ಚಿನ್ನದ ಬಳೆಗಳನ್ನು ಧರಿಸಿದ್ದರು.
4/ 7
ಪತಿಯೊಂದಿಗೆ ವೆಡ್ಡಿಂಗ್ ಸ್ಟೈಲ್ನಲ್ಲಿ ಕಾಣಿಸಿಕೊಂಡ ಜೋಡಿ ಹ್ಯಾಪಿಯಾಗಿ ಫೋಟೋಗೆ ಪೋಸ್ ಕೊಡುತ್ತಿರುವುದು ಕಂಡು ಬಂದಿದೆ.
5/ 7
ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಹಂಚಿಕೊಂಡ ದೆವೋಲೀನಾ, ನೀವು ನನ್ನ ಜೀವನಾಡಿಯಾಗಿದ್ದೀರಿ ಎಂದು ಕೆಂಪು ಹೃದಯದ ಎಮೋಜಿ ಹಾಕಿದ್ದಾರೆ. ಅವರು ಶಾನವಾಜ್ ಅವರನ್ನು ಟ್ಯಾಗ್ ಮಾಡಿದ್ದರು.
6/ 7
ಚಿತ್ರಕ್ಕೆ ಪ್ರತಿಕ್ರಿಯಿಸಿದ ದೆವೋಲೀನಾ ಅವರ ಅಭಿಮಾನಿಯೊಬ್ಬರು, "ನಿಮ್ಮಿಬ್ಬರಿಗೂ ಪ್ರೀತಿ ಕಳುಹಿಸುತ್ತಿದ್ದೇವೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, "ನನ್ನ ಗೋಪಿ ಯಾವಾಗಲೂ ಸಂತೋಷವಾಗಿರಲಿ" ಎಂದು ಕಾಮೆಂಟ್ ಮಾಡಿದ್ದಾರೆ.
7/ 7
2012-17ರಲ್ಲಿ ಸಾಥ್ ನಿಭಾನ ಸಾಥಿಯಾ ಎಂಬ ಧಾರಾವಾಹಿಯಲ್ಲಿ ಗೋಪಿ ಬಹು ಪಾತ್ರವನ್ನು ನಿರ್ವಹಿಸಿದ ನಂತರ ದೆವೋಲೀನಾ ಜನಪ್ರಿಯತೆ ಗಳಿಸಿದರು.