Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

Bollywood: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ರು. ಆರಾಧ್ಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಹಲವು ಯೂಟ್ಯೂಬ್ ಚಾನೆಲ್​ಗಳಿಗೆ ಛೀಮಾರಿ ಹಾಕಿದೆ.

First published:

  • 18

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಬಾಲಿವುಡ್ ತಾರಾ ಜೋಡಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಕೆಲವು ಯೂಟ್ಯೂಬ್ ಚಾನೆಲ್​ಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿವೆ. ಎಂದು ಆರಾಧ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫೋಟೋ:ಇನ್ಸ್ಟಾಗ್ರಾಮ್)

    MORE
    GALLERIES

  • 28

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಆರಾಧ್ಯ ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಹಲವು ಯೂಟ್ಯೂಬ್ ಚಾನೆಲ್ಗಳಿಗೆ ಛೀಮಾರಿ ಹಾಕಿದೆ. ಫೇಕ್ ನ್ಯೂಸ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಡಿಲೀಟ್ ಮಾಡುವಂತೆ ಸೂಚಿಸಿದೆ. (ಫೋಟೋ: Instagram)

    MORE
    GALLERIES

  • 38

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಕೆಲವು ಯೂಟ್ಯೂಬ್ ಚಾನೆಲ್​ಗಳು ಆರಾಧ್ಯ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಆಯಾ ಯೂಟ್ಯೂಬ್ ವೀಡಿಯೊಗಳು ಮತ್ತು  URLಗಳನ್ನು ತೆಗೆದುಹಾಕಲು ಆದೇಶ ನೀಡುವಂತೆ ದೆಹಲಿ ಹೈಕೋರ್ಟ್​ಗೆ ಆರಾಧ್ಯ ಅರ್ಜಿ ಸಲ್ಲಿಸಿದ್ದಾರೆ. (ಫೋಟೋ: Instagram)

    MORE
    GALLERIES

  • 48

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಆರಾಧ್ಯ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ದೆಹಲಿ ಹೈಕೋರ್ಟ್ 9 ಯೂಟ್ಯೂಬ್ ಚಾನೆಲ್​ಗಳ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಂಕರ್ ಅವರು ಗುರುವಾರ ಅರ್ಜಿಯ ವಿಚಾರಣೆ ನಡೆಸಿದರು. ಈ ಪ್ರಕರಣದಲ್ಲಿ ಖ್ಯಾತ ವಕೀಲ ದಯನ್ ಕೃಷ್ಣನ್ ಸೇರಿದಂತೆ ಒಟ್ಟು 14 ವಕೀಲರು ಆರಾಧ್ಯ ಪರವಾಗಿ ವಾದ ಮಂಡಿಸಿದರು. (ಫೋಟೋ: Instagram)

    MORE
    GALLERIES

  • 58

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಅವರ ವಾದವನ್ನು ಒಪ್ಪಿದ ನ್ಯಾಯಾಧೀಶರು ಯೂಟ್ಯೂಬ್ ಚಾನೆಲ್​ಗಳು ಮತ್ತು ಯೂಟ್ಯೂಬ್ ಮಾತೃಸಂಸ್ಥೆ ಗೂಗಲ್​ಗೆ ಛೀಮಾರಿ ಹಾಕಿದರು. ಆರಾಧ್ಯ ಬಚ್ಚನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಸೂಚನೆ ನೀಡಿದೆ. (ಫೋಟೋ: Instagram)

    MORE
    GALLERIES

  • 68

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಆರಾಧ್ಯ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ಯೂಟ್ಯೂಬ್ ಚಾನೆಲ್ ಕೆಲವು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದೆ. ಈ ಸುದ್ದಿ ಬಚ್ಚನ್ ಕುಟುಂಬವನ್ನು ತಲುಪಿತು. ಇದೀಗ ಆ ಸುಳ್ಳು ಸುದ್ದಿ ವಿರುದ್ಧ ಅಪ್ರಾಪ್ತೆ ಆರಾಧ್ಯ ದೆಹಲಿ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಫೋಟೋ: Instagram)

    MORE
    GALLERIES

  • 78

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ದೆಹಲಿ ಹೈಕೋರ್ಟ್ ತೀರ್ಪಿಗೆ ತಕ್ಷಣ ಪ್ರತಿಕ್ರಿಯಿಸಲು ಮತ್ತು ಯೂಟ್ಯೂಬ್​ನಲ್ಲಿನ ವೀಡಿಯೊಗಳನ್ನು ತೆಗೆಯುವಂತೆ ನ್ಯಾಯಮೂರ್ತಿ ಶಂಕರ್ ಅವರು ಗೂಗಲ್​ಗೆ ಆದೇಶಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಗೆ ಆದೇಶಿಸಲಾಗಿದೆ. (ಫೋಟೋ: Instagram)

    MORE
    GALLERIES

  • 88

    Bollywood: ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ಚಾಟಿ ಬೀಸಿದ ದೆಹಲಿ ಹೈಕೋರ್ಟ್! ಐಶ್ವರ್ಯಾ ರೈ ಮಗಳು ಆರಾಧ್ಯ ಬಗ್ಗೆ ಹೇಳಿದ್ದೇನು?

    ಸಿನಿಮಾ ತಾರೆಯರ ಮಕ್ಕಳ ವಿಚಾರ, ವೈಯಕ್ತಿಕ ವಿಚಾರಗಳ ಬಗ್ಗೆ ಫೇಕ್ ನ್ಯೂಸ್ ಜೊತೆಗೆ ಅವರ ಆರೋಗ್ಯ ಸರಿಯಿಲ್ಲ, ಸತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳುವ ಟ್ರೋಲಿಂಗ್ ಸಂಸ್ಕೃತಿ ಇತ್ತೀಚಿಗೆ ಹೆಚ್ಚಾಗಿದೆ. ಬಿಗ್ ಬಿ ಕುಟುಂಬವು ಈ ಪ್ರವೃತ್ತಿಯನ್ನು ಖಂಡಿಸುವ ಮೂಲಕ ಮಾದರಿಯಾಗಿದೆ. (ಫೋಟೋ: Instagram)

    MORE
    GALLERIES