ಬಿಕಿನಿಯ ಗಾತ್ರವನ್ನು ಇನ್ನಷ್ಟು ಕಡಿಮೆ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ನಟಿ. ಇದಲ್ಲದೇ ಶಾರುಖ್ ಖಾನ್ ಜೊತೆಗಿನ ಆಕೆಯ ರೋಮ್ಯಾಂಟಿಕ್ ಸ್ಟೆಪ್ಸ್ ಕೂಡ ಎಲ್ಲರ ಹುಬ್ಬೇರಿಸಿದೆ. ಆದರೆ ದೀಪಿಕಾ ಇಷ್ಟೊಂದು ಎಕ್ಸ್ಪೋಸಿಂಗ್ ಹಾಡಿನಲ್ಲಿ ಕಾಣಿಸಿಕೊಳ್ಳೋಕೆ ಈ ಚಿತ್ರಕ್ಕೆ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಪಠಾನ್ ಚಿತ್ರಕ್ಕೆ ದೀಪಿಕಾ 10 ರಿಂದ 15 ಕೋಟಿ ಪಡೆಯಲಿದ್ದಾರೆ.
ಈ ಮಧ್ಯೆ ಮತ್ತೊಂದೆಡೆ ದೀಪಿಕಾ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿದ್ದು, ದುರುದ್ದೇಶದಿಂದಲೇ ಈ ಸಾಂಗ್ ಶೂಟ್ ಮಾಡಲಾಗಿದೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಅವರ ಹೇಳಿಕೆಗಳು ರಾಷ್ಟ್ರವ್ಯಾಪಿ ಟ್ರೆಂಡ್ ಆಗಿವೆ. ಇದೇ ವೇಳೆ ಈ ವಿಚಾರವಾಗಿ ಪ್ರಕಾಶ್ ರಾಜ್ ಮಧ್ಯೆ ಪ್ರವೇಶಿಸಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಜೊತೆಗಿನ ದೀಪಿಕಾ ರೊಮ್ಯಾನ್ಸ್ ವಿವಾದಕ್ಕೀಡಾಗಿತ್ತು. ಈ ಹಾಡು ಮತ್ತು ಅದರಲ್ಲಿನ ರೋಮ್ಯಾಂಟಿಕ್ ದೃಶ್ಯಗಳ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಕಾಮೆಂಟ್ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಜನಪ್ರಿಯ ನಟ ಪ್ರಕಾಶ್ ರಾಜ್ ಅವರಿಗೆ ತೀವ್ರವಾಗಿ ಕೌಂಟರ್ ನೀಡಿದ್ದಾರೆ. ದೀಪಿಕಾ ಅವರನ್ನು ಬೆಂಬಲಿಸಿ ಅವರ ಟ್ವೀಟ್ ವೈರಲ್ ಆಗಿದೆ.
ಇನ್ನು ಪಠಾಣ್ ಸಿನಿಮಾದ ವಿಚಾರಕ್ಕೆ ಬಂದರೆ ಶಾರುಖ್ ಖಾನ್ ಈ ಸಿನಿಮಾದಲ್ಲಿ ರಾ ಏಜೆಂಟ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ದೀಪಿಕಾ ಜೊತೆಗೆ ಜಾನ್ ಅಬ್ರಹಾಂ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.