Deepika Padukone: ನಟಿ ದೀಪಿಕಾರ ಈ ಓವರ್ ಸೈಜ್ ಜಾಕೆಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಫ್ಯಾಶನ್ ಲುಕ್ಗೆ ಮನಸೋಲದವರಿಲ್ಲ. ಅನೇಕರು ಅವರ ಫ್ಯಾಷನ್ ಅನ್ನು ಫಾಲೋ ಮಾಡಲು ಕೂಡ ಮುಂದಾಗುತ್ತಾರೆ. ಆದರೆ, ಕೆಲವೊಮ್ಮೆ ತಮ್ಮ ಫ್ಯಾಷನ್ ಸೆನ್ಸ್ನಿಂದ (Fashio) ಕೆಲವೊಮ್ಮೆ ಟ್ರೋಲ್ (Troll) ಆಗುತ್ತಾರೆ. ಕೇವಲ ದೀಪಿಕಾ ಮಾತ್ರವಲ್ಲ ಅನೇಕ ಸೆಲೆಬ್ರಿಟಿಗಳು ಕೂಡ ತಮ್ಮ ಇಂತಹ ಕೆಲವು ಅಭಾಸ ಶೈಲಿ ಡ್ರೆಸ್ಸಿಂಗ್ ತೊಟ್ಟು ಟ್ರೋಲ್ ಆಗುತ್ತಾರೆ.
ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡ್ರೆಸ್ಸಿಂಗ್ ಸೆನ್ಸ್ ಜನರ ಗಮನ ಸೆಳೆಯಿತು. ದೊಡ್ಡ ಗಾತ್ರದ ನೀಲಿ ಡೆನಿಮ್ ಜಾಕೆಟ್ ಮತ್ತು ತಿಳಿ ನೀಲಿ ಹೀಲ್ಸ್ನೊಂದಿಗೆ ಬಿಳಿ ಬಣ್ಣದ ಸಾಕ್ಸ್ನಲ್ಲಿ ದೀಪಿಕಾ ಕಾಣಿಸಿಕೊಂಡರು. ದೀಪಿಕಾ ಅವರ ಈ ಚಿತ್ರಗಳು ಕಾಣಿಸಿಕೊಂಡ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಫ್ಯಾಷನ್ ಸೆನ್ಸ್ ಬಗ್ಗೆ ಚರ್ಚೆಯಾಯಿತು
2/ 6
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯಾವಾಗಲೂ ಫ್ಯಾಶನ್ ಲುಕ್ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಈ ಬಾರಿ ದೀಪಿಕಾ ಅವರ ದೊಡ್ಡ ಗಾತ್ರದ ಡೆನಿಮ್ ಜಾಕೆಟ್ ಸಾಕಷ್ಟು ಟೀಕೆಗೆ ಗುರಿಯಾಗಿದೆ.
3/ 6
ಸದಾ ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ತಮ್ಮ ಫ್ಯಾಷನ್ ಸೆನ್ಸ್ನಿಂದ ಟೀಕೆಗೆ ಒಳಗಾಗುತ್ತಿದ್ದರೂ ಈ ಬಾರಿ ನಟಿ ದೀಪಿಕಾ ಧಿರಿಸು ಎಲ್ಲರ ಗಮನಸೆಳೆದಿದೆ.
4/ 6
ನಟಿ ದೀಪಿಕಾ ಪಡುಕೋಣೆ ತೊಟ್ಟ ಈ ಧಿರಿಸು ಅಭಾಸವಾದರೂ ಇದರ ಬೆಲೆ ಏನು ಕಡಿಮೆ ಇಲ್ಲ, ದೀಪಿಕಾ ಪಡುಕೋಣೆಯ ಈ ಡೆನಿಮ್ ಜಾಕೆಟ್ ಬೆಲೆ 59,500 ಯುರೋಗಳು. ಫ್ಯಾಷನ್ ತಾಣವೊಂದರ ಪ್ರಕಾರ ಇದರ ಬೆಲೆ ಭಾರತೀಯ ರೂಪಾಯಿ 50 ಲಕ್ಷ, 44 ಸಾವಿರ, 112 ರೂಪಾಯಿ.
5/ 6
दीಇನ್ನು ದೀಪಿಕಾ ಅವರ ಈ ಫ್ಯಾಷನ್ ಮೇಲೆ ಗಂಡ ರಣವೀರ್ ಸಿಂಗ್ ಪ್ರಭಾವ ಇರಬೇಕು. ಇದೇ ಕಾರಣಕ್ಕೆ ನಟಿ ದೀಪಿಕಾ ಇಂತಹ ಜಾಕೆಟ್ ತೊಟ್ಟಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. (Photo: viral//Instagram)
6/ 6
ನಟಿ ದೀಪಿಕಾ ಹಾಗೂ ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆ ಸಜ್ಜಾಗಿದ್ದು, ಎಲ್ಲರ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಕಪಿಲ್ ದೇವ್ ಹೆಂಡತಿ ರುಮಿ ಭಟಿಯಾ ಪಾತ್ರದಲ್ಲಿ ನಟಿಸಿದ್ದಾರೆ (Photo: deepikapadukone/Instagram)