Deepika Padukone: ಕ್ಯಾನ್ ಸಿನಿಮೋತ್ಸವದಲ್ಲಿ ದೀಪಿಕಾ ಸ್ಟೈಲ್ಗೆ ಅಭಿಮಾನಿಗಳು ಫಿದಾ - ಪದ್ಮಾವತ್ ಬೆಡಗಿಯ ಲುಕ್ ನೀವೂ ನೋಡಿ
Deepika @Cannes: ದೀಪಿಕಾ ಪಡುಕೋಣೆ, ಬಾಲಿವುಡ್ನಲ್ಲಿ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ಸೂಪರ್ ಸ್ಟಾರ್ ಆದವರು. ಅವರ ಒಂದೊಂದು ಸಿನೆಮಾಗಳು ಅವರಿಗೆ ಹೆಸರನ್ನು ತಂದುಕೊಟ್ಟಿದೆ. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಸಹ ದೀಪಿಕಾ ಫೇಮಸ್. ಸದ್ಯ ಅಲ್ಲಿನ ಪ್ರಸಿದ್ದ ಕ್ಯಾನ್ ಸಿನಿಮೋತ್ಸವ ನಡೆಯುತ್ತಿದೆ. ಪ್ರತಿ ಬಾರಿಯೂ ರೆಡ್ ಕಾರ್ಪೆಟ್ ಮೇಲೆ ಮಿಂಚುವ ಡಿಂಪಿ ಈ ಬಾರಿ ಜ್ಯೂರಿ ಸಹ ಆಗಿದ್ದರು. ಹಾಗೆಯೇ ಒಂದೊಂದು ದಿನವೂ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ ನಟಿಯ ಫೋಟೋಗಳು ಇಲ್ಲಿದೆ.
ದೀಪಿಕಾ ಪಡುಕೋಣೆ ಕಸ್ಟಮ್ ಲೂಯಿ ವಿಟಾನ್ ಬ್ರೋಕೇಡ್ ಡ್ರೆಸ್ ಅನ್ನು ಡ್ರಮ್ಯಾಟಿಕ್ ಸ್ಲೀವ್ನೊಂದಿಗೆ ಧರಿಸಿದ್ದು, ಅವರ ಈ ಲುಕ್ ನಿಜಕ್ಕೂ ಅದ್ಬುತವಾಗಿದೆ.
2/ 10
ಈ ರಿಚರ್ಡ್ ಕ್ವಿನ್ ಫ್ಲೋರಲ್ ಡ್ರೆಸ್ ದೀಪಿಕಾ ಅವರ ಅಂದವನ್ನು ಹೆಚ್ಚಿಸುತ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
3/ 10
ಆಶಿ ಸ್ಟೋಡಿಯೋ ಅವರು ಡಿಸೈನ್ ಮಾಡಿರುವ ಈ ಆರೆಂಜ್ ಗೌನ್ ಸುಂದರವಾಗಿದ್ದದ್ದು ಮಾತ್ರವಲ್ಲದೇ, ಅವರ ಕೆಲ ವಿಡಿಯೋಗಳು ಟ್ರೋಲ್ ಆಗಿದೆ.
4/ 10
ಲೂಯಿಸ್ ವ್ಯಾಟನ್ ಬ್ರಾಂಡ್ ಅಂಬಾಸಿಡರ್ ಆಗಿರುವ ದೀಪಿಕಾ ಈ ಬ್ಲಾಕ್ ಡ್ರೆಸ್ನಲ್ಲಿ ಬೊಂಬಾಟ್ ಆಗಿ ಕಾಣ್ತಿದ್ದಾರೆ
5/ 10
ರೆಟ್ರೋ ವೈಬ್ ಕೊಡುವ ಈ ಗ್ರೀನ್ ಡ್ರೆಸ್, ಬಹಳ ಸಿಂಪಲ್ ಮಾತ್ರವಲ್ಲದೇ ಯೂನಿಕ್ ಕೂಡ.
6/ 10
ಪಿಂಕ್ ಸ್ಕರ್ಟ್ ಮತ್ತು ಪ್ರಿಂಟೆಂಡ್ ಶರ್ಟ್ನಲ್ಲಿ ಸ್ಯಾಸಿ ಲುಕ್ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಕ್ಯಾನ್ನಲ್ಲಿ ಹೆಚ್ಚು ವಿಭಿನ್ನವಾಗಿ ಕಾಣಿಸಿಕೊಂಡ ನಟಿ ಎನಿಸಿಕೊಂಡಿದ್ದಾರೆ.
7/ 10
ತಮ್ಮ ಅದ್ಬುತ ನಟನೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ದೀಪಿಕಾ ಪ್ರಪಂಚದ ಪ್ರತಿಷ್ಟಿತ ಅವಾರ್ಡ್ ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿ ಪಾಲ್ಗೊಂಡಿರುವುದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರ.
8/ 10
ಈ ಬ್ಲಾಕ್ ಗೌನ್ ಮತ್ತು ಹರಳಿನ ನೆಕ್ಲೇಸ್ನಲ್ಲಿ ದೀಪಿಕಾ ತುಂಬಾ ಕ್ಲಾಸಿಯಾಗಿ ಕಾಣಿಸುತ್ತಿದ್ದಾರೆ.
9/ 10
ಬ್ಲಾಕ್ ಟಾಪ್ ಮತ್ತು ಈ ಚೆಕ್ ಸ್ಕರ್ಟ್ನಲ್ಲಿ ದೀಪಿಕಾ ಹೇಗೆ ಕಾಣಿಸುತ್ತಿದ್ದಾರೆ ಎಂಬುದನ್ನ ಹೇಳುವ ಅಗತ್ಯವಿಲ್ಲ ಅನಿಸುತ್ತದೆ.
10/ 10
ಜ್ಯೂರಿ ಮೆಂಬರ್ ಜೊತೆ ಮೊದಲ ದಿನ ಔತಣ ಕೂಟದಲ್ಲಿ ಭಾಗವಹಿಸಿದ್ದ ದೀಪಿಕಾ ಲೂಯಿ ವಿಟಾನ್ ಅವರ ಫಾಲ್ 2021 ಸಂಗ್ರಹದಿಂದ ದೀಪಿಕಾ ಸೀಕ್ವಿನ್ಡ್ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದು. ಅದಕ್ಕೆ ಸರಿ ಹೊಂದುವ ಕಂದು ಬಣ್ಣದ ಎತ್ತರದ ಬೂಟುಗಳನ್ನು ಧರಿಸಿ ಬಹಳ ಸುಂದರವಾಗಿ ಕಾಣುತ್ತಿದ್ದರು.