ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ನಟಿ ದೀಪಿಕಾ ಪಡುಕೋಣೆ ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯವರು. ದೀಪಿಕಾ ಪಡುಕೋಣೆ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ದೀಪಿಕಾರ ಪೋಷಕರಾದ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲ ಪಡುಕೋಣೆ ಈಗಲೂ ಬೆಂಗಳೂರಿನಲ್ಲಿಯೇ ಇದ್ದಾರೆ. ದೀಪಿಕಾಳಿಗೆ ದೇಶದಾದ್ಯಂತ ಅಭಿಮಾನಿಗಳ ಬಳಗವಿದ್ದು, ಇನ್ನೂ ಬೆಂಗಳೂರಿನಲ್ಲಂತೂ ಕೇಳೋದೆ ಬೇಡ. ದೀಪಿಕಾ ಬೆಂಗಳೂರಿಗೆ ಯಾವುದೇ ಕಾರ್ಯಕ್ರಮದ ನಿಮಿತ್ತ ಬಂದರೂ ಅಭಿಮಾನಿಗಳು ಕಿಕ್ಕಿರಿದು ತುಂಬಿರುತ್ತಾರೆ.
ದೀಪಿಕಾ ತಮ್ಮ ನಟನೆ, ಸೌಂದರ್ಯದಿಂದ ಮಾತ್ರವಲ್ಲದೆ ಅವರ ಸ್ಟೈಲ್ ಸ್ಟೇಟ್‌ಮೆಂಟ್, ಉಡುಗೆಯಿಂದಲೂ ಕಣ್ಣುಕುಕ್ಕುತ್ತಲೇ ಇರುತ್ತಾರೆ. ದೀಪಿಕಾಳ ಏರ್‌ಪೋರ್ಟ್ ಲುಕ್ ಆಗಿರಬಹುದು, ಅವರು ಈವೆಂಟ್‌ಗೆ ಹೋಗುವಾಗ ಧರಿಸುವ ಉಡುಗೆಗಳಾಗಿರಬಹುದು ಎಲ್ಲದರಲ್ಲೂ ತಮ್ಮ ಗಂಭೀರತೆ, ಮಾದಕ ನೋಟವನ್ನು ಕ್ಯಾರಿ ಮಾಡುತ್ತಾರೆ. ಇದೇ ಕಾರಣಕ್ಕೆ ಈ ನಟಿ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎನ್ನಬಹುದು.
ದೀಪಿಕಾಳನ್ನು ನೋಡಿ ಕುಣಿದಾಡಿದ ಫ್ಯಾನ್ಸ್: ದೀಪಿಕಾಳನ್ನು ನೋಡಿ ಅಭಿಮಾನಿಗಳಂತು ಹುಚ್ಚೆದ್ದು ಕುಣಿದಾಡಿದರು. ಒಬ್ಬ ಅಭಿಮಾನಿ "ದೀಪಿಕಾ ವಿ ಲವ್ ಯೂ, ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ" ಎಂದು ಕೂಗಿ ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ ದೀಪಿಕಾ ಅವರನ್ನು ನೋಡಿ ಖುಷಿಯಿಂದ ನಿಮ್ಮನ್ನು ನೋಡುವುದೇ ಒಂದು ಬೋನಸ್ ಇದ್ದಂತೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಹಲವು ಅಭಿಮಾನಿಗಳು ದೀಪಿಕಾರನ್ನು ನೋಡಿ ತಮ್ಮ ತಮ್ಮ ಖುಷಿ ವ್ಯಕ್ತಪಡಿಸಿದರು.
ಮತ್ತೋರ್ವ ದೀಪಿಕಾಳ ಡೈಹಾರ್ಡ್ ಫ್ಯಾನ್ "ಇಷ್ಟು ವರ್ಷಗಳಿಂದ ನನಗೆ ಸ್ಫೂರ್ತಿ ನೀಡಿದ ವ್ಯಕ್ತಿಯನ್ನು ನಾನು ಭೇಟಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನಿಜಕ್ಕೂ ಇದು ನನಗೆ ಕನಸು ಎನಿಸುತ್ತಿದೆ" ಎಂದು ಹೇಳಿದ್ದಾರೆ. ದೀಪಿಕಾ ಅವರು ಉಪಸ್ಥಿತರಿದ್ದ ಕಾರ್ಯಕ್ರಮದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳು ದೀಪಿಕಾ ಅವರನ್ನು ನೋಡಿದ ಸಂತಸದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಲ್ಲಿ ಮನೆ ಖರೀದಿಸಿರುವ ದೀಪಿಕಾ: ದೀಪಿಕಾ ಪಡುಕೋಣೆ ಅವರ ತಂದೆ-ತಾಯಿ ಹಾಗೂ ತಂಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಅವರನ್ನು ನೋಡಲು ದೀಪಿಕಾ ಪಡುಕೋಣೆ ಆಗಾಗ ಬೆಂಗಳೂರಿಗೆ ಬರುತ್ತಿರುತ್ತಾರೆ. ದೀಪಿಕಾ ಬೆಂಗಳೂರಲ್ಲಿ ಮನೆ ಕೂಡ ಖರೀದಿಸಿದ್ದಾರೆ. ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದಲ್ಲಿರೋ ಅಪಾರ್ಟ್ಮೆಂಟ್ನಲ್ಲಿ ದೀಪಿಕಾ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. 26 ಅಂತಸ್ತಿನ ಕಟ್ಟಡದಲ್ಲಿ 22ನೇ ಅಂತಸ್ತಿನಲ್ಲಿ ಏಳು ಕೋಟಿ ನೀಡಿ ಮನೆ ಖರೀದಿಸಿದ್ದಾರೆ.
ಸದ್ಯ ಪಠಾಣ್ ಚಿತ್ರದ ಸಕ್ಸಸ್ ನಂತರ ದೀಪಿಕಾ, ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಹೃತಿಕ್ ರೋಷನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ. ಅನಿಲ್ ಕಪೂರ್ ಸಹ ಅಭಿಯನಿಸುತ್ತಿರುವ ಈ ಚಿತ್ರವು ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಶಾರುಖ್ ಖಾನ್ ಅವರೊಂದಿಗೆ ನಟಿಸಿದ ಓಂ ಶಾಂತಿ ಓಂನೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ದೀಪಿಕಾ ನಂತರ ಬಾಲಿವುಡ್‌ನ ಬ್ಯುಸಿ ನಟಿಯಾಗಿದ್ದಾರೆ.