ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಬರ್ತ್ಡೇ ಸಂಭ್ರಮ. ಪಠಾನ್ ನಟಿ 37ನೇ ವರ್ಷದ ಬರ್ತ್ಡೇ ಆಚರಿಸುತ್ತಿದ್ದಾರೆ. ಬಾಲಿವುಡ್ನ ಅತ್ಯಂತ ಪ್ರಸಿದ್ಧ ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಫೇಮಸ್.
2/ 9
ತಾನು ಬಯಸಿದ್ದೆಲ್ಲವನ್ನೂ ಸಾಧಿಸಿಕೊಂಡಿದ್ದಾರೆ ದೀಪಿಕಾ. ದೀಪಿಕಾ ಬರ್ತ್ಡೇ ಸಂದರ್ಭ ಅಭಿಮಾನಿಗಳ ಪ್ರಶ್ನೆ ಅವರ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ. 2023ರಲ್ಲಿ ಅಮ್ಮನಾಗ್ತಾರಾ ದೀಪಿಕಾ?
3/ 9
ಆಲಿಯಾ ಭಟ್ನಿಂದ ಸೋನಂ ಕಪೂರ್ವರೆಗೆ ಬಾಲಿವುಡ್ನಲ್ಲಿ ಅನೇಕ ನಟಿಯರು 2022ರಲ್ಲಿ ತಾಯಿಯಾಗಿದ್ದಾರೆ. ಈಗ ಅಭಿಮಾನಿಗಳ ಕಣ್ಣು ದೀಪಿಕಾ ಅವರ ಕಡೆ ನೆಟ್ಟಿದೆ.
4/ 9
ಸದ್ಯ ದೀಪಿಕಾ ಅಲ್ಲ ಮತ್ತು ರಣವೀರ್ ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ ಎನ್ನಲಾಗಿದೆ. ರಣವೀರ್ ಕೂಡಾ ತಮ್ಮ ಕೆರಿಯರ್ ಪೀಕ್ನಲ್ಲಿದ್ದಾರೆ.
5/ 9
ಈಗ ರಣವೀರ್ ಸಿಂಗ್ ಮತ್ತು ದೀಪಿಕಾ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಅವರ ಅಭಿಮಾನಿಗಳು ಶೀಘ್ರದಲ್ಲೇ ಬಿಟೌನ್ ಜೋಡಿ ಸಿಹಿ ಸುದ್ದಿಯನ್ನು ಘೋಷಿಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ.
6/ 9
ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತನಾಡುತ್ತಾ ದೀಪಿಕಾ ನಮಗೂ ಮಕ್ಕಳೆಂದರೆ ಇಷ್ಟ ಎಂದು ಹೇಳಿದ್ದಾರೆ. ತಾವೂ ಮಗುವನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಆದರೆ ಯಾವಾಗ ಎಂದು ನಮಗೂ ಗೊತ್ತಿಲ್ಲ ಎಂದಿದ್ದರು.
7/ 9
ರಣವೀರ್ ಮತ್ತು ನಾನು ಕುಟುಂಬವನ್ನು ಪ್ರಾರಂಭಿಸಿದಾಗ, ನಮ್ಮ ಬಾಲ್ಯ ಹೇಗಿತ್ತೋ ಅದನ್ನೇ ನಮ್ಮ ಮಕ್ಕಳಿಗೂ ನೀಡಲು ಸಾಧ್ಯವಾಗುತ್ತದೆ ಎಂದುಕೊಂಡಿದ್ದೇನೆ ಎಂದಿದ್ದಾರೆ.
8/ 9
ದೀಪಿಕಾ ಮತ್ತು ರಣವೀರ್ ಈ ವರ್ಷ ಪೋಷಕರಾಗುತ್ತಾರೆ ಎನ್ನಲಾಗಿದೆ. ಮಕ್ಕಳನ್ನು ಹೊಂದುವ ಮೊದಲು ರಣವೀರ್ ದೀಪಿಕಾ ಅವರ ಮಾತೃಭಾಷೆ ಕೊಂಕಣಿ ಕಲಿಯಲು ಪ್ಲಾನ್ ಮಾಡಿದ್ದಾರಂತೆ.
9/ 9
ಈ ಕ್ಯೂಟ್ ಜೋಡಿ ಮಕ್ಕಳಾಗುವ ಮುನ್ನ ಎಷ್ಟೊಂದು ಪ್ಲಾನಿಂಗ್ ಇಟ್ಟುಕೊಂಡಿದ್ದಾರಲ್ಲಾ ಎಂದು ಅಚ್ಚರಿಪಡುತ್ತಿದ್ದಾರೆ ಅಭಿಮಾನಿಗಳು.