DeepVeer Tirupati Visit : ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದೀಪಿಕಾ-ರಣವೀರ್..! DeepVeer First Anniversary: ದೀಪ್ವೀರ್ ವಿವಾಹವಾಗಿ ಇಂದಿಗೆ ಸರಿಐಆಗಿ ಒಂದು ವರ್ಷ. ಮೊದಲ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದೀಪಿಕಾ-ರಣವೀರ್ ಸಿಂಗ್ ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ. (ಚಿತ್ರಗಳು ಕೃಪೆ: ದೀಪಿಕಾ ಪಡುಕೋಣೆ ಅಭಿಮಾನಿಗಳ ಹಾಗೂ ಇನ್ಸ್ಟ್ಯಾಂಟ್ ಬಾಲಿವುಡ್ ಇನ್ಸ್ಟಾಗ್ರಾಂ ಖಾತೆ).
1 / 9
ಬಿ-ಟೌನ್ನ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
2 / 9
ಅದರ ಅಂಗವಾಗಿಯೇ ದೀಪ್ವೀರ್ ಇಂದು ಬೆಳಿಗ್ಗೆಯೇ ತಿರುಪತಿಗೆ ಭೇಟಿ ನೀಡಿದ್ದು, ತಿಮ್ಮಪ್ಪನ ಸನ್ನಿಧಾನ ಸೇರಿಕೊಂಡಿದ್ದಾರೆ.
3 / 9
ತಿಮ್ಮಪ್ಪನ ಸನ್ನಿಧಾನದಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
4 / 9
ದೀಪಿಕಾ ಕೆಂಪು ಬಣ್ಣದ ಸೀರೆಯಲ್ಲಿ ಹಾಗೂ ರಣವೀರ್ ಚಿನ್ನದ ಬಣ್ಣದ ಸೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.
5 / 9
ತಿಮ್ಮಪ್ಪನ ಸನ್ನಿಧಾನದಲ್ಲಿ ದೀಪ್ವೀರ್ ಎಂಟ್ರಿ ಕೊಡುತ್ತಿದ್ದಂತೆಯೇ ಅವರ ಚಿತ್ರಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿವೆ.
6 / 9
ದೀಪಿಕಾರ ಫ್ಯಾನ್ಸ್ ಪೇಜ್ ಹಾಗೂ ಇನ್ಸ್ಟ್ಯಾಂಟ್ ಬಾಲಿವುಡ್ ಇನ್ಸ್ಟಾಗ್ರಾಂ ಪುಟಗಳಲ್ಲಿ ಅವರ ಚಿತ್ರಗಳು ಹರಿದಾಡುತ್ತಿವೆ.
7 / 9
ಇಂದು ತಿರುಪತಿಗೆ ಭೇಟಿ ನೀಡಿರುವ ದೀಪ್ವೀರ್ ನಾಳೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಹೋಗಲಿದ್ದಾರೆ.
8 / 9
ದೀಪ್ವೀರ್ ತಮ್ಮ ಎರಡೂ ಕುಟುಂಬದವರೊಂದಿಗೆ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
9 / 9
ತಿರುಪತಿಯ ತಿರುಮಲದಲ್ಲಿ ದೀಪ್ವೀರ್
First published: November 14, 2019, 12:09 IST