Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

Debina Bonnerjee: ನಟಿ ಡೆಬಿನಾ ಬ್ಯಾನರ್ಜಿ ಮತ್ತು ಗುರ್ಮೀತ್ ಚೌಧರಿ ತಮ್ಮ ಪುತ್ರಿಯರಾದ ಲಿಯಾನಾ ಮತ್ತು ದಿವಿಶಾ ಅವರೊಂದಿಗೆ ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳಿದರು. ಟ್ರಿಪ್ ಎಂಜಾಯ್ ಮಾಡಿದ ಜೋಡಿ ಅಲ್ಲೇ ಮದುವೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಆದ್ರೆ ವಾಪಸ್ ಆದ ಬಳಿಕ ಡೆಬಿನಾ ಮಕ್ಕಳಿಂದ ದೂರವಾಗಿದ್ದಾರೆ. ಕಾರಣ ಏನು ಗೊತ್ತಾ?

First published:

  • 17

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಇಬ್ಬರು ಮುದ್ದಾದ ಮಕ್ಕಳ ಜೊತೆ ಡೆಬಿನಾ ಶ್ರೀಲಂಕಾ ಟ್ರಿಪ್ ಹೋಗಿದ್ದಾರೆ. ಮಕ್ಕಳನ್ನು ಮೊದಲ ಬಾರಿಗೆ ವಿದೇಶಕ್ಕೆ ಕರೆದೊಯ್ದಿದ್ದರು. ಆದ್ರೆ ಟ್ರಿಪ್ ಮುಗಿಸಿ ವಾಪಸ್ ಭಾರತಕ್ಕೆ ಹಿಂತಿರುಗಿದಾಗ ಹೊಸ ಕಾಯಿಲೆಯನ್ನು ಜೊತೆಗೆ ತಂದಿದ್ದಾರೆ. (ಫೋಟೋ ಕೃಪೆ: ಫೇಸ್​ಬುಕ್ @DebinaBonnerjee)

    MORE
    GALLERIES

  • 27

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಈ ಕಾಯಿಲೆಯಿಂದಾಗಿ ಡೆಬಿನಾ ಬ್ಯಾನರ್ಜಿ ತಮ್ಮ ಹೆಣ್ಣುಮಕ್ಕಳಿಂದ ದೂರ ಉಳಿದಿದ್ದಾರೆ. ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಈ ವಿಚಾರವನ್ನು ನಟಿಯೇ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದಾರೆ. (ಫೋಟೋ ಕೃಪೆ: ಫೇಸ್​ಬುಕ್ @DebinaBonnerjee)

    MORE
    GALLERIES

  • 37

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಭಾರತಕ್ಕೆ ಬಂದ ನಂತರ ಡೆಬಿನಾ ಬ್ಯಾನರ್ಜಿ ಶೀತ ಹಾಗೂ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಟೆಸ್ಟ್ ಮಾಡಿಸಿದಾಗ ಅವರಿಗೆ ಇನ್ಫ್ಲುಯೆಂಜಾ ಬಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ರೋಗ ಪತ್ತೆಯಾದ ತಕ್ಷಣ ತನ್ನ ಕುಟುಂಬದಿಂದ ನಟಿ ದೂರ ಉಳಿದಿದ್ದಾರೆ. (ಫೋಟೋ ಕೃಪೆ: ಫೇಸ್ಬುಕ್ @DebinaBonnerjee)

    MORE
    GALLERIES

  • 47

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಗುರ್ಮೀತ್ ಚೌಧರಿ ಮತ್ತು ತಮ್ಮ ಇಬ್ಬರು ಪುತ್ರಿಯರಾದ ಲಿಯಾನಾ ಮತ್ತು ದಿವಿಶಾ ಅವರನ್ನು ಸಹ ಪರೀಕ್ಷೆ ಒಳಪಡಿಸಲಾಗಿದೆ. ಅವರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಚೆನ್ನಾಗಿದ್ದಾರೆ. ನಟಿ ಡೆಬಿನಾ ಆರೋಗ್ಯದ ಬಗ್ಗೆ ಇದೀಗ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. (ಫೋಟೋ ಕೃಪೆ: ಫೇಸ್ಬುಕ್ @DebinaBonnerjee)

    MORE
    GALLERIES

  • 57

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಡೆಬಿನಾ ಬ್ಯಾನರ್ಜಿ ಅವರ ಮ್ಯಾನೇಜರ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಡೆಬಿನಾ ಅವರು, ಇನ್ಫ್ಲುಯೆಂಜಾ ಬಿ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಆಗ್ತಿದೆ. ಉತ್ತಮ ಚಿಕಿತ್ಸೆ ಕೂಡ ನೀಡಲಾಗ್ತಿದೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.

    MORE
    GALLERIES

  • 67

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಮ್ಯಾನೇಜರ್ ಕೂಡ ಡೆಬಿನಾ ಬ್ಯಾನರ್ಜಿ ತನ್ನ ಹೆಣ್ಣು ಮಕ್ಕಳಾದ ದಿವಿಶಾ ಮತ್ತು ಲಿಯಾನಾರಿಂದ ದೂರವಿದ್ದಾರೆ ಎಂದು ತಿಳಿಸಿದ್ದಾರೆ. ಮಕ್ಕಳು ಸುರಕ್ಷಿತವಾಗಿದ್ದು, ಡೆಬಿನಾ ಕೂಡ ಚೇತರಿಸಿಕೊಳ್ತಿದ್ದಾರೆ.

    MORE
    GALLERIES

  • 77

    Debina Bonnerjee: ಮುದ್ದಾದ ಮಕ್ಕಳಿಂದ ದೂರವಾಗಿದ್ಯಾಕೆ ನಟಿ? ಡೆಬಿನಾ ಬ್ಯಾನರ್ಜಿಗೆ ಏನಾಗಿದೆ?

    ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬ್ಯಾನರ್ಜಿ ಶ್ರೀಲಂಕಾದಲ್ಲಿ ಪ್ರೇಮಿಗಳ ದಿನ ಮತ್ತು ಅವರ ವಿವಾಹ ವಾರ್ಷಿಕೋತ್ಸವವನ್ನು ಒಟ್ಟಿಗೆ ಆಚರಿಸಿದರು. ಆ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. (ಫೋಟೋ ಕೃಪೆ: ಫೇಸ್ಬುಕ್ @DebinaBonnerjee)

    MORE
    GALLERIES