Vijayalakshmi Darshan: ಹೊಸ ಉದ್ಯಮ ಆರಂಭಿಸಿದ ವಿಜಯಲಕ್ಷ್ಮಿ: ರೈತರಿಗೆ ನೆರವಾಗಲಿದ್ದಾರಾ ದರ್ಶನ್ ಮಡದಿ..!
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇವರು, ಈಗ ಹೊಸ ಉದ್ಯಮ ಆರಂಭಿಸಿದ್ದಾರಂತೆ. ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ವಿಜಯಲಕ್ಷ್ಮಿ ದರ್ಶನ್ ಟ್ವಿಟರ್)
ದರ್ಶನ್ ಮಡದಿ ವಿಜಯಲಕ್ಷ್ಮಿ ಸ್ವಂತವಾಗಿ ಒಂದು ಹೊಸ ಉದ್ಯಮ ಆರಂಭಿಸಲಿದ್ದಾರಂತೆ.
2/ 10
ಈಗಾಗಲೇ ಅವರ ಹೊಸ ಉದ್ಯಮ ಆರಂಭಿಸೋಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ.
3/ 10
ಸಾಮಾಜಿಕ ಜಾಲತಾಣದಲ್ಲಿ ತಾವು ಕೈ ಹಾಕಿರುವ ಉದ್ಯಮದ ಬಗ್ಗೆ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ.
4/ 10
ಹೌದು, ಕಮಿಂಗ್ ಸೂನ್ ಎನ್ನುತ್ತಲೇ ತಾವು ಆರಂಭಿಸಲಿರುವ ಉದ್ಯಮದ ಕುರಿತು ಒಂದು ಸುಳಿವು ಕೊಟ್ಟಿದ್ದಾರೆ.
5/ 10
ವಿಜಯಲಕ್ಷ್ಮಿ ಹಣ್ಣು-ತರಕಾರಿ ಮಾರುವ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸದ್ಯದಲ್ಲೇ ಇದಕ್ಕೆ ಕಿಕ್ ಸ್ಟಾರ್ಟ್ ಸಿಗಲಿದೆ.
6/ 10
ನಗರದ ಸುತ್ತಮುತ್ತಲು ಬೆಳೆಯುವ ತಾಜಾ ಹಣ್ಣು-ತರಕಾರಿಯನ್ನು ಮಾರಾಟ ಮಾಡುವ ಕೆಲಸ ಆರಂಭಿಸಲಿದ್ದಾರಂತೆ.
7/ 10
ಆದರೆ ವಿಜಯಲಕ್ಷ್ಮಿ ಅವರ ಉದ್ಯಮ ಸರಣಿ ಮಾರಾಟ ಮಳಿಗೆಗಳೋ ಅಥವಾ ಆನ್ಲೈನ್ನಲ್ಲೋ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಅದಕ್ಕೆ ಡಿಬಾಸ್ ಅಭಿಮಾನಿಗಳು ಹಾಗೂ ನೆಟ್ಟಿಗರು ಈ ಕುರಿತು ಮಾಹಿತಿ ನೀಡುವಂತೆ ಕಮೆಂಟ್ ಮಾಡುತ್ತಿದ್ದಾರೆ.
8/ 10
ಕೊರೋನಾದಿಂದಾಗಿ ಜನರು ಮನೆಗಳಿಂದ ಹೊರ ಹೋಗಲು ಹೆದರುತ್ತಿರುವಾಗ, ನಿತ್ಯದ ಬಳಕೆಗೆ ತಾಜಾ ಹಣ್ಣು-ತರಕಾರಿಯನ್ನು ಮಾರುವ ಆಲೋಚನೆ ಮಾಡಿರುವುದು ನಿಜಕ್ಕೂ ಒಳ್ಳೆಯ ಐಡಿಯಾ ಎನ್ನಬಹುದು.
9/ 10
ವಿಜಯಲಕ್ಷ್ಮಿ ಅವರ ಈ ಹೊಸ ಉದ್ಯಮ ಆಗಸ್ಟ್ 15ರಿಂದ ಕಿಕ್ ಸ್ಟಾರ್ಟ್ ಆಗಲಿದೆ ಎನ್ನಲಾಗುತ್ತಿದೆ.
10/ 10
ರೈತರಿಂದ ನೇರವಾಗಿ ಹಣ್ಣು-ತರಕಾರಿ ಖರೀದಿಸುವ ಈ ಆಲೋಚನೆಯಿಂದ, ಅನ್ನದಾತನಿಗೂ ಲಾಭವಾಗಬಹುದು.