Darshan: ದರ್ಶನ್ ಶಾಲಾ ದಿನಗಳಲ್ಲಿ ಇವರೇ ಸಾರಥಿ; 80 ವರ್ಷದ ವೃದ್ಧನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್
Saarathi: ದರ್ಶನ್ ತುಂಬಾ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ತನ್ನ ಜೀವನದಲ್ಲಿ ಏಳಿಗೆಯಾಗಲು ಕಾರಣವಾದವರು ಹಾಗೂ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳಂತೆ ಕಾಣುತ್ತಾರೆ. ಅವರು ತಮ್ಮ ಪ್ರೀತಿ ಪಾತ್ರರಿಗೆ ನೀಡುವ ಗೌರಮ ಹಾಗೂ ಸ್ಥಾನ ಕುರಿತಾಗಿ ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮ ಶಾಲಾ ದಿನಗಳಲ್ಲಿ ಸಾರಥಿಯಾಗಿ ಶಾಲೆಗೆ ತಲುಪಿಸುತ್ತಿದ್ದ ಚಾಲಕನನ್ನು ಅವರ 80ನೇ ಹುಟ್ಟುಹಬ್ಬದಂದು ಭೇಟಿಯಾಗಿದ್ದಾರೆ ದರ್ಶನ್. (ಚಿತ್ರಗಳು ಕೃಪೆ: ದರ್ಶನ್ ಇನ್ಸ್ಟಾಗ್ರಾಂ ಖಾತೆ)
ದರ್ಶನ್ ಬೆಳ್ಳಿತೆರೆ ಮೇಲೆ ಸಾರಥಿಯಾಗಿ ಮಿಂಚಿದ್ದು ಗೊತ್ತೇ ಇದೆ. ಈ ಸಿನಿಮಾ ದರ್ಶನ್ ಅವರ ಸಿನಿಜೀವನಕ್ಕೆ ತಿರುವು ನೀಡಿದ ಚಿತ್ರ ಎಂದರೆ ತಪ್ಪಾಗದು. ಇಂತಹ ಸಾರಥಿ ಈಗ ತಮ್ಮ ರಿಯಲ್ ಲೈಫ್ನಲ್ಲಿ ಸಾರಥಿಯಾಗಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡಿದ್ದಾರೆ.
2/ 6
ಹೌದು, ದರ್ಶನ್ ಅವರ ಜೊತೆ ಇರುವ ಈ ವ್ಯಕ್ತಿ ಕೆಎಸ್ಆರ್ಟಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ದರ್ಶನ್ ಅವರು ಶಾಲೆಗೆ ಹೋಗುವ ಮಾರ್ಗದ ರಸ್ತೆಯಲ್ಲಿ ಪಯಣಿಸುವ ಬಸ್ಗೆ ಚಾಲಕರಾಗಿದ್ದರಂತೆ.
3/ 6
ನಿನ್ನೆ ಅವರ 80ನೇ ವರ್ಷದ ಹುಟ್ಟುಹಬ್ಬ. ತಮ್ಮ ಶಾಲಾ ದಿನಗಳ ರಿಯಲ್ ಸಾರಥಿ ಹುಟ್ಟುಹಬ್ಬದಂದು, ಅವರ ಮನೆಗೆ ಸರ್ಪ್ರೈಸ್ ಆಗಿ ಭೇಟಿ ಕೊಟ್ಟಿದ್ದಾರೆ ದರ್ಶನ್.
4/ 6
ಹೂಗುಚ್ಛ ಕೊಟ್ಟು ಅವರ 80ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
5/ 6
ಈ ಕುರಿತಾಗಿ ದರ್ಶನ್, ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನುಪೋಸ್ಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
6/ 6
ತೆರೆ ಮೇಲೆ ಸಾರಥಿಯಾಗಿ ಮಿಂಚಿರುವ ನಟನ ಶಾಲಾ ದಿನಗಳ ನಿಜ ಜೀವನದ ಸಾರಥಿ ಇವರೇ.