ಅಲ್ಲಿ ದರ್ಶನ್ ಅವರ ಜೊತೆ ಮಗನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಇನ್ನು ವಂಶಿಕ್ಗೆ ಮೂರು ವರ್ಷ ಇದ್ದಾಗಿನಿಂದ ದರ್ಶನ್ ಎಂದರೆ ತುಂಬಾ ಇಷ್ಟವಂತೆ. ಇದೇ ಕಾರಣದಿಂದ ಈ ಸಲದ ಹುಟ್ಟುಹಬ್ಬಕ್ಕೆ ದರ್ಶನ್ ಅವರನ್ನು ಭೇಟಿ ಮಾಡಲು ಹೋಗಿದ್ದಾಗಿ ಹಾಗೂ ದರ್ಶನ್ ಜೊತೆ ಸಮಯ ಕಳೆದಿದ್ದಾಗಿಯೂ ಶಿವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.