ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆ ಸಂಭ್ರಮ: ನಿಖಿಲ್ ಕುಮಾರಸ್ವಾಮಿ-ಶಿವಣ್ಣನಿಗೂ ಸಿಕ್ತು ಪ್ರೀತಿಯ ಆಹ್ವಾನ..!
Krishna- Milana Nagaraj Wedding: ಸ್ಯಾಂಡಲ್ವುಡ್ನ ಮೋಸ್ಟ್ ಹ್ಯಾಪನಿಂಗ್ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಫೆ. 14ರಂದು ನವದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಇವರ ಮದುವೆಯ ಕರೆಯೋಲೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮನೆ ತಲುಪುತ್ತಿದೆ. ಸುದೀಪ್, ನಮಿತಾ ರತ್ನಾಕರ್, ಅಮೂಲ್ಯಾ, ಯಶ್, ತಮನ್ನಾ ಭಾಟಿಯಾ ಸೇರಿದಂತೆ ಹಲವರಿಗೆ ಇವರ ಲಗ್ನಪತ್ರಿಕೆ ತಲುಪಿದೆ. ಈಗ ನಿಖಿಲ್ ಕುಮಾರಸ್ವಾಮಿ ಹಾಗೂ ಶಿವಣ್ಣನಿಗೂ ಜೋಡಿ ತಮ್ಮ ವಿವಾಹಕ್ಕೆ ಆಹ್ವಾನಿಸಿದ್ದಾರೆ. (ಚಿತ್ರಗಳು ಕೃಪೆ: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇನ್ಸ್ಟಾಗ್ರಾಂ ಖಾತೆ)
ಸೆಲೆಬ್ರಿಟಿ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆಗೆ ದಿನ ಗಣನೆ ಆರಂಭವಾಗಿದೆ. ಬಹಳ ಸಮಯದಿಂದ ಪ್ರೀತಿಸುತ್ತಿರುವ ಈ ಜೋಡಿ ಪ್ರೇಮಿಗಳ ದಿನದಂದು ನವ ಜೀವನ ಆರಂಭಿಸಲಿದ್ದಾರೆ.
2/ 8
ತಮ್ಮ ಮದುವೆಯಗೆ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನು ಆಹ್ವಾನಿಸಿದ್ದಾರೆ ಕೃಷ್ಣ-ಮಿಲನಾ.
3/ 8
ಈ ಜೋಡಿ ತಮ್ಮ ವಿವಾಹಕ್ಕೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರರಿಗೂ ಪ್ರೀತಿಯ ಕರೆಯೋಲೆ ನೀಡಿದ್ದಾರೆ.
4/ 8
ಈ ಹಿಂದೆ ನಟಿ ತಮ್ಮನ್ನಾ ಅವರಿಗೂ ಈ ಜೋಡಿಯ ಆಮಂತ್ರಣ ಪತ್ರಿಕೆ ತಲುಪಿದೆ.
5/ 8
ತಮ್ಮನಾ ಜೊತೆ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್
6/ 8
ರಾಕಿಂಗ್ ಸ್ಟಾರ್ ಯಶ್ ಅವರಿಗೂ ಮನೆಗೆ ಹೋಗಿ ಲಗ್ನ ಪತ್ರಿಕೆ ನೀಡಿದ್ದಾರೆ ಈ ಜೋಡಿ.
7/ 8
ಸಿನಿಮಾ ಚಿತ್ರೀಕರಣದ ಸೆಟ್ನಲ್ಲಿ ತಮನ್ನಾ ಜೊತೆ ಕೃಷ್ಣ-ಮಿಲನಾ ನಾಗರಾಜ್
8/ 8
ನಮಿತಾ ಹಾಗೂ ಸುದೀಪ್ಗೆ ಲಗ್ನ ಪತ್ರಿಕೆ ಕೊಟ್ಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್