ಸ್ಯಾಂಡಲ್ವುಡ್ ನಟಿ ಡೈಸಿ ಬೋಪಣ್ಣ ಸುಂದರವಾದ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ ಈ ಗಾಳಿಪಟ ಚೆಲುವೆ. ಸುಂದರವಾದ ಲೈಟ್ ಪಿಂಕ್ ಕಲರ್ ರೋಸ್ಗಳನ್ನು ಹಿಡಿದು ಡೈಸಿ ಪೋಸ್ ಕೊಟ್ಟಿದ್ದಾರೆ. ನಟಿ ಕೂದಲನ್ನು ಫ್ರೀಯಾಗಿ ಬಿಟ್ಟು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಸಿಂಪಲ್ ಆಗಿರುವ ಮೇಕಪ್ ಮಾಡಿದ್ದು ಬಾಟಂ ವೇರ್ ಮಾತ್ರ ಧರಿಸಿದ್ದಾರೆ. ನಟಿ ಟಾಪ್ಲೆಸ್ ಆಗಿದ್ದು ರೋಸ್ನಿಂದ ತಮ್ಮ ದೇಹವನ್ನು ಮುಚ್ಚಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಬ್ಲ್ಯಾಕ್ ಕಲರ್ ಲೆದರ್ ಟೈಪ್ ಸ್ಕರ್ಟ್ ಧರಿಸಿದ್ದರು ಡೈಸಿ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಇವರು ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ನಟಿ ಇನ್ಸ್ಟಾಗ್ರಾಮ್ನಲ್ಲಿ 100 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇಲ್ಲಿವರೆಗೂ 200ಕ್ಕೂ ಹೆಚ್ಚು ಪೋಸ್ಟ್ಗಳನ್ನು ಮಾಡಿದ್ದಾರೆ. ಡೈಸಿ ಬೋಪಣ್ಣ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಡೈಸಿ ಮೂಲತಃ ಕೊಡಗಿನವರು. ಅವರು ಬೆಂಗಳೂರಿನ ಚಿತ್ರ ಕಲಾ ಪರಿಷತ್ನಲ್ಲಿ ಕಲಿತಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.