ಸೆ.16ರಂದು ತೆರೆಕಂಡಿದ್ದ ಮಾನ್ಸೂನ್ ರಾಗ ಸಿನಿಮಾವೂ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ನಟ ಧನಂಜಯ್ ಮತ್ತು ನಟಿ ರಚಿತಾ ರಾಮ್ ಅಭಿನಯಿಸಿದ್ದಾರೆ.
2/ 8
ಸಂಕ್ರಾಂತಿ ಹಬ್ಬದಂದು ಅಂದ್ರೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮಾನ್ಸೂನ್ ರಾಗ ಸಿನಿಮಾ ಪ್ರಸಾರವಾಗಲಿದೆ. ಚಿತ್ರ್ಕಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರ ಚೆನ್ನಾಗಿದೆ ಎಂದು ಪ್ರೇಕ್ಷಕರು ಹೇಳಿದ್ದರು. ಡಿಸೆಂಬರ್ 9ರಿಂದ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
3/ 8
ಮಾನ್ಸೂನ್ ರಾಗವನ್ನು ಎಸ್. ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ಮುದ ನೀಡಿದೆ. ಚಿತ್ರದ ಹಾಡುಗಳು ಹಿಟ್ ಆಗಿದ್ದವು. ಅಲ್ಲದೇ ಚಿತ್ರಕ್ಕೆ ಎಸ್.ಕೆ. ರಾವ್ ಅವರ ಛಾಯಾಗ್ರಹಣ ಇದೆ.
4/ 8
ಮಾನ್ಸೂನ್ ರಾಗಾದಲ್ಲಿ ನಟಿ ಯಶಾ ಶಿವಕುಮಾರ್ ಅವರು ರಾಗ ಸುಧಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಒಂದು ಮ್ಯೂಸಿಕಲ್ ವಿಡಿಯೋ ಎಲ್ಲರ ಗಮನಸೆಳೆದಿತ್ತು. ಯಶಾ ಅವರ ಡ್ಯಾನ್ಸ್, ಸಿನಿಮಾಟೊಗ್ರಫಿ ಜನರಿಗೆ ಇಷ್ಟವಾಗಿತ್ತು.
5/ 8
ಅಲ್ಲದೇ ಅನೂಪ್ ಸೀಳಿನ್ ಅವರು ಚಂಡೆ ಮತ್ತು ವಯಲಿನ್ ಜುಗಲ್ಬಂದಿಯನ್ನು ಹಾಡಿನಲ್ಲಿ ಬಳಸಿಕೊಂಡಿದ್ದು ಎಲ್ಲರ ಗಮನ ಸೆಳೆದಿತ್ತು. ಈ ಸಿನಿಮಾವಉ 70-80ರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ.
6/ 8
ಅಚ್ಯುತ್ ಅವರು, ಸಿನಿಮಾದಲ್ಲಿ ತಾವೂ ಸಂತೋಷವಾಗಿರುತ್ತಾ, ತಮ್ಮ ಸುತ್ತಲಿರುವವರನ್ನು ಸಂತೋಷದಿಂದ ಇಟ್ಟುಕೊಂಡಿರುವ ರೋಲ್ ಮಾಡಿದ್ದಾರೆ. ಅದು ಜನರಿಗೆ ಇಷ್ಟವಾಗಿದೆ.
7/ 8
ಈ ಸಿನಿಮಾವನ್ನು ಕುಂದಾಪುರದ ಪೋರ್ಟ್, ಆಗುಂಬೆ, ಗಂಗೊಳ್ಳಿ, ಶೃಂಗೇರಿ, ಗೋವಾ ಮತ್ತಿತರ ಕಡೆಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ.
8/ 8
ಚಿತ್ರದಲ್ಲಿ ಧನಂಜಯ್ ಮತ್ತು ರಚಿತಾ ರಾಮ್, ಸಹಾಸಿನಿ ಮತ್ತು ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಶೋಭರಾಜ್, ರಘು ಗೌಡ, ಬ್ರೋ ಗೌಡ ಸೇರಿದಂತೆ ಅನೇಕರು ಸಿನಿಮಾದಲ್ಲಿ ಇದ್ದಾರೆ.