ಬಲಿ ಎಂಬ ಖಳನಾಯಕನಾಗಿ ಕಾಣಿಸಿಕೊಂಡಿರುವ ನವೀನ್ ಶಂಕರ್ ಅವರ ನಟನೆ ಮಾತ್ರ ಎಲ್ಲರನ್ನು ಕ್ಲೀನ್ ಬೋಲ್ಡ್ ಮಾಡಿದೆ. ಅಮೃತಾ ಅಯ್ಯಂಗಾರ್ ನಿಭಾಯಿಸಿರುವ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಇನ್ನೂ ಡಾಲಿ ಅವರ ಸ್ನೇಹಿತ ನಾಗಭೂಷಣ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ನಟರಾಕ್ಷಸನ ಎದುರು ಮತ್ತೊಬ್ಬ ನಟರಾಕ್ಷಸ ಇದ್ದರೆ ಏನಾಗಬೇಡ ನೀವೇ ಹೇಳಿ. ಒಟ್ನಲ್ಲಿ ಈ ವೀಕೆಂಡ್ ಪಕ್ಕಾ ಮಾಸ್ ಸಿನಿಮಾ ನೋಡಬೇಕು ಅಂದ್ರೆ ಗುರುದೇವ್ ಹೊಯ್ಸಳ ಮೀಸ್ ಮಾಡಬೇಡಿ.