ಟಗರು ಡಾಲಿ ಧನಂಜಯ್ ಇದೀಗ ‘ಬಡವ ರಾಸ್ಕಲ್‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಆದ ಡಾಲಿ ಪಿಕ್ಚರ್ಸ್ ಬ್ಯಾನರ್ನಡಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ್ ನಾಯಕಿಯಾಗಿ ಅಮೃತಾ ಅಯ್ಯಾಂಗರ್ ಬಣ್ಣ ಹಚ್ಚಿದ್ದಾರೆ. ಚಿತ್ರವನ್ನು ಶಂಕರ್ಗುರು ನಿರ್ದೇಶಿಸುತ್ತಿದ್ದಾರೆ. ‘ಬಡವ ರಾಸ್ಕಲ್‘ ಚಿತ್ರದಲ್ಲಿ ಧನಂಜಯ ಅವರ ಗೆಳೆಯರಾದ ನಾಗಭೂಷನ್, ಪೂರ್ಣ ಚಂದ್ರ ತೇಜಸ್ವಿ, ಶಮಂತ, ಚಂದ್ರು, ನಿರಂಜನ್ ಸೇರಿದಂತೆ ಸಾಕಷ್ಟು ಜನರು ನಟಿಸುತ್ತಿದ್ದಾರೆ. ‘ಬಡವ ರಾಸ್ಕಲ್‘ ಚಿತ್ರವನ್ನು ಡಾಲಿ ಧನಂಜಯ ನಿರ್ಮಾಣ ಮಾಡುತ್ತಿದ್ದು, ಇವರೊಂದಿಗೆ ಗುಜ್ವಾಲ್ ಪುರುಷೋತ್ತಮ್ ಸಹ ಕೈಜೋಡಿಸುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ‘ಬಡವ ರಾಸ್ಕಲ್‘ ಅವತಾರದಲ್ಲಿ ಡಾಲಿ ಧನಂಜಯ್ ಸ್ಕ್ರೀನ್ ಮೇಲೆ ಬರಲಿದ್ದಾರೆ ‘ಬಡವ ರಾಸ್ಕಲ್‘ ಸಿನಿಮಾ ‘ಬಡವ ರಾಸ್ಕಲ್‘ ಸಿನಿಮಾದ ಕೆಲ ದೃಶ್ಯ ‘ಬಡವ ರಾಸ್ಕಲ್‘ ಸಿನಿಮಾದ ಕೆಲ ದೃಶ್ಯ ‘ಬಡವ ರಾಸ್ಕಲ್‘ ಸಿನಿಮಾದ ಕೆಲ ದೃಶ್ಯ