ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಸಿನಿಮಾ "KD" ಚಿತ್ರದ ಹೊಸ ಅಪ್ಡೇಟ್ ಈಗ ಲಭ್ಯವಾಗಿದೆ.
2/ 7
ಈಗಾಗಲೇ ಸಖತ್ ಟೆರರ್ ಲುಕ್ನಲ್ಲಿ ಕಾಣಿಸಿಕೊಂಡ ನಟ ಧ್ರುವ ಸರ್ಜಾರ ಅವರ ಪೋಸ್ಟರ್ ಈಗಾಗಲೇ ಟ್ರೆಂಡ್ ಆಗಿದೆ. ಈಗ ಚಿತ್ರತಂಡಕ್ಕೆ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ.
3/ 7
ಕೆವಿಎನ್ ಪ್ರೊಡಕ್ಷನ್ನ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಮಾಸ್ ಲುಕ್ ರಿವೀಲ್ ಆಗಿದೆ. ಡೈರೆಕ್ಟರ್ ಪ್ರೇಮ್ ಲಾಂಗ್, ಮಚ್ಚು ಎಂದು ಹೊರಟ ಮೇಲೆ ಹೇಳಬೇಕೇ? ಸಿನಿಮಾ ಕ್ರೇಜ್ ಸೃಷ್ಟಿಸಿದೆ.
4/ 7
ಇದೀಗ ಕೆಡಿ ಸಿನಿಮಾಗೆ ರವಿಚಂದ್ರನ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ರವಿಚಂದ್ರನ್ ಅವರ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
5/ 7
ಸಿನಿಮಾಗೆ ಸಂಬಂಧಪಟ್ಟ ಅಪ್ಡೇಟ್ಗಳನ್ನು ಕೆವಿಎನ್ ಪ್ರೊಡಕ್ಷನ್ ತನ್ನ ಟ್ವಿಟರ್ ಪೇಜ್ನಲ್ಲಿ ಅಪ್ಡೇಟ್ ಮಾಡುತ್ತಲೇ ಇರುತ್ತದೆ. ಈಗ ರವಿಚಂದ್ರನ್ ಲುಕ್ ರಿವೀಲ್ ಆಗಿದೆ.
6/ 7
ಯುದ್ಧದಲ್ಲಿ ಕ್ರೇಜಿಯಾಗಿರುವವರನ್ನು ಮರೆಯಲು ಸಾಧ್ಯವೇ ಇಲ್ಲ. ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಲಿಯಾಸ್ ಅಣ್ಣಯ್ಯಪ್ಪ ಅವರನ್ನು ಕೆಡಿ ಯುದ್ಧ ಭೂಮಿಗೆ ಸ್ವಾಗತಿಸುತ್ತಿದ್ದೇವೆ ಎಂದು ಪೋಸ್ಟ್ ಮಾಡಲಾಗಿದೆ.
7/ 7
ಇದರಲ್ಲಿ ರವಿಚಂದ್ರನ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಯಲ್ಲಿ ವಿಭೂತಿ, ಕೂಲಿಂಗ್ ಗ್ಲಾಸ್, ಗುಂಗುರು ಕೂದಲು ಅವರ ಲುಕ್ ಇನ್ನಷ್ಟು ಹೆಚ್ಚಿಸಿದೆ.